ನವದೆಹಲಿ, ಮಾ 19 (DaijiworldNews/DB): ಜಾಗತಿಕ ಮಾರುಕಟ್ಟೆ ಸದ್ಯದ ಮಟ್ಟಿಗೆ ನಲುಗುತ್ತಿದೆ. ಆದರೆ ಭಾರತದ ಆರ್ಥಿಕ ಹಾಗೂ ಬ್ಯಾಂಕಿಂಗ್ ವ್ಯವಸ್ಥೆ ಸದೃಢತೆ ಕಾಯ್ದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಡೀ ಜಗತ್ತೇ ಬಿಕ್ಕಟ್ಟು ಎದುರಿಸುತ್ತಿದೆ. ಆರ್ಥಿಕವಾಗಿ ಜಗತ್ತಿಗೆ ಹಲವು ಸವಾಲುಗಳು ಎದುರಾಗಿವೆ. ಆದರೆ ಭಾರತ ಬಲಿಷ್ಠ ಆರ್ಥಿಕತೆ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ನಮ್ಮ ಸಂಸ್ಥೆಗಳ ಶಕ್ತಿಯೇ ಇದು ಎಂದರು.
ಯುಎಸ್ನ ಮಧ್ಯಮ ಗಾತ್ರದ ಎರಡು ಬ್ಯಾಂಕ್ಗಳ ಕುಸಿತ ಇಡೀ ಪ್ರಪಂಚದಲ್ಲಿ ಬ್ಯಾಂಕ್ ಷೇರುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗಿದೆ. ಇದರಿಂದ ಜಾಗತಿಕ ಹಣಕಾಸು ವ್ಯವಸ್ಥೆ ಮೇಲೆಯೂ ಪರಿಣಾಮ ಬೀರಿದೆ. ಹೊಸ ಆತಂಕಗಳ ಉದ್ಭವಕ್ಕೆ ಈ ಬೆಳವಣಿಗೆ ಕಾರಣವಾಗಿದೆ ಎಂದವರು ಹೇಳಿದರು.