ಭದೋಹಿ (ಉತ್ತರ ಪ್ರದೇಶ), ಮಾ 19 (DaijiworldNews/DB): ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ 22 ವರ್ಷದ ಯುವಕನೊಬ್ಬ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಅಜಯ್ ಕುಮಾರ್ ಯಾದವ್ಗೆ ಶಿಕ್ಷೆಗೆ ಗುರಿಯಾದಾತ. ಫೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ಹಕ್ಕು) ಕಾನೂನಿನಡಿ ಆತನ ವಿರುದ್ದ ಪ್ರಕರಣ ದಾಖಲಾಗಿತ್ತು. ಇದೀಗ ನ್ಯಾಯಮೂರ್ತಿ ಮಧು ಡೋಗ್ರಾ ಅವರು ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 33 ಸಾವಿರ ರೂ. ದಂಡ ವಿಧಿಸಿ ಭಾನುವಾರ ತೀರ್ಪು ನೀಡಿದ್ದಾರೆ. 33 ಸಾವಿರ ರೂ. ಪೈಕಿ 25 ಸಾವಿರ ರೂ.ಗಳನ್ನು ಸಂತ್ರಸ್ತ ಬಾಲಕಿಗೆ ನೀಡಬೇಕಾಗುತ್ತದೆ ಎಂದವರು ಆದೇಶಿಸಿದ್ದಾರೆ.
ಎಂಟನೇ ತರಗತಿ ವಿದ್ಯಾರ್ಥಿನಿ, 16 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ಈತ ಅತ್ಯಾಚಾರ ಎಸಗಿದ್ದ. ಬಾಲಕಿಯ ತಂದೆ ಈತನ ವಿರುದ್ದ ದೂರು ದಾಖಲಿಸಿದ್ದರು.