ಅಮೃತಸರ,ಮ್ ಮಾ 19 (DaijiworldNews/HR): ಮೂಲಭೂತವಾದಿ ಸಿಖ್ ಬೋಧಕ ಮತ್ತು ಖಲಿಸ್ತಾನ್ ಸಹಾನುಭೂತಿ ಹೊಂದಿರುವ ಅಮೃತಪಾಲ್ ಸಿಂಗ್ ಪರಾರಿಯಾಗಿದ್ದು, ಆತನನ್ನು ಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೃತಪಾಲ್ ಸಿಂಗ್
ಪಂಜಾಬ್ ಸರಕಾರ ಅಮೃತಪಾಲ್ ವಿರುದ್ಧ ಶನಿವಾರ ಭಾರಿ ಕಾರ್ಯಾಚರಣೆ ಪ್ರಾರಂಭಿಸಿದ್ದು, ಪೊಲೀಸರು ಆತನ ನೇತೃತ್ವದ ಸಶಸ್ತ್ರ ಗುಂಪಿನ ಸದಸ್ಯರನ್ನು ಬಂಧಿಸಿ ಅಮೃತಪಾಲ್ ಸಿಂಗ್ ಬಳಸಿದ್ದ ಕಾರು ಮತ್ತು ಮದ್ದುಗುಂಡುಗಳನ್ನ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಇನ್ನು ಅಮೃತಪಾಲ್ ಸಿಂಗ್ ನ ನಾಲ್ವರು ಶಂಕಿತ ಆಪ್ತ ಸಹಾಯಕರನ್ನು ಪಂಜಾಬ್ ಪೊಲೀಸರು ದಿಬ್ರುಗಢಕ್ಕೆ ಕರೆದೊಯ್ದಿದ್ದಾರೆ.