ಬೆಂಗಳೂರು, ಮಾ 20 (DaijiworldNews/MS): ಕಾಂಗ್ರೆಸ್ ನ ಮಾಸ್ ಲೀಡರ್ ಸಿದ್ದರಾಮಯ್ಯ ಕ್ಷೇತ್ರ ಗೊಂದಲ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.
ಮಾಜಿ ಸಿಎಂ ಮುಂದಿನ ಸಿಎಂ ರೇಸ್ ನಲ್ಲೂ ಮುಂಚೂಣಿಯಲ್ಲಿರುವುದರಿಂದ ಸಿದ್ದರಾಮಯ್ಯ ಸ್ಪರ್ಧಿಸುವುದು ಎಲ್ಲಿಂದ ಎನ್ನೋ ಕುತೂಹಲ ಕಾಡುತ್ತಿದೆ.
ಹಾಲಿ ಕ್ಷೇತ್ರ ಬಾದಾಮಿಯಲ್ಲಿ ಮತ್ತೆ ಸ್ಪರ್ಧೆ ಮಾಡಲು ಅವಕಾಶ ಇದ್ದರು ಅಲ್ಲಿ ಎದುರಾಳಿಗಳು ಒಂದಾಗುವ ಭಯವಿದೆ. ಕೋಲಾರದಲ್ಲಿ ಅಂದುಕೊಂಡಂತೆ ಸಮೀಕ್ಷೆಗಳು ಸಿದ್ದು ಪರವಾಗಿ ಬಂದಿಲ್ಲ. ವರುಣಾ ಸುರಕ್ಷಿತ ಕ್ಷೇತ್ರವಾದರೂ ಪುತ್ರನ ರಾಜಕೀಯ ಹಾದಿಗೆ ಮುಳ್ಳಾಗುತ್ತದೆ.
ಇನ್ನು ಬೆಂಗಳೂರಿನ ಚಾಮರಾಜಪೇಟೆ, ಕೊಪ್ಪಳದ ಕುಷ್ಟಗಿ ಕ್ಷೇತ್ರ ಚರ್ಚೆಯಲ್ಲಿದ್ದರೂ ಅಲ್ಲಿ ಕಣಕ್ಕಿಳಿಯುವುದು ಸುಲಭದ ಮಾತಲ್ಲ. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಟಿಕೆಟ್ ಮೀಟಿಂಗ್ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಎಲೆಕ್ಷನ್ ರಣತಂತ್ರ ಒಟ್ಟಾರೆ ಅತಂತ್ರವಾಗಿದೆ. ಒಟ್ಟಿನಲ್ಲಿ ತ್ರಿಕೋಣ ಸುಳಿಯಲ್ಲಿ ಸಿಲುಕಿರುವ ಸಿದ್ದರಾಮಯ್ಯ ನಡೆ ಯಾವ ಕ್ಷೇತ್ರದತ್ತ ಎನ್ನುವ್ವುದು ಕೌತುಕವಾಗಿದೆ.