ಅಮರಾವತಿ, ಮಾ 20 (DaijiworldNews/HR): ಆಂಧ್ರ ಪ್ರದೇಶ ಅಸೆಂಬ್ಲಿಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಮತ್ತು ಟಿಡಿಪಿ ಶಾಸಕರ ನಡುವೆ ಕೋಲಾಹಲ ನಡೆದಿದೆ.
ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಬಳಿಗೆ ಟಿಡಿಪಿ ಸದಸ್ಯರು ಘೋಷಣೆ ಕೂಗುತ್ತಾ ತೆರಳಿ ಪ್ರತಿಭಟನೆ ತೀವ್ರಗೊಳಿಸಿದಾಗ, ವೈಎಸ್ ಆರ್ ಪಿ ಸದಸ್ಯರು ಕೂಡಾ ಸ್ಪೀಕರ್ ಪೀಠದ ಬಳಿ ತೆರಳಿದರು. ಆಗ ಘರ್ಷಣೆಯ ಪರಿಸ್ಥಿತಿ ಉಂಟಾಗಿದೆ.
ಇನ್ನು ಉದ್ರಿಕ್ತ ಟಿಡಿಪಿ ಸದಸ್ಯರಿಂದ ಸ್ಪೀಕರ್ ಅವರನ್ನು ರಕ್ಷಿಸುವ ಯತ್ನದಲ್ಲಿ ವೈಎಸ್ ಆರ್ಸಿಪಿ ಸದಸ್ಯರು ಅಲ್ಲಿಂದ ಕೆಲವರು ಟಿಪಿಡಿ ಶಾಸಕರನ್ನು ತಳ್ಳಿದ್ದು, ಇದರಿಂದ ಆಕ್ರೋಶಗೊಂಡ ಟಿಡಿಪಿ ಸದಸ್ಯರು, ವೈಎಸ್ ಆರ್ ಪಿಸಿ ಶಾಸಕರೊಂದಿಗೆ ಕೈ ಕೈ ಮಿಲಾಯಿಸಿದ್ದಾರೆ.