ಭೋಪಾಲ್, ಮಾ. 23 (DaijiworldNews/HR): ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಲ್ಟನ್ ಮತ್ತು ಫ್ರೆಡ್ಡಿ ಎಂಬ ಹೆಸರಿನ ಎರಡು ಗಂಡು ಚೀತಾಗಳು ಆಗಮಿಸಿದ್ದು, ಅವುಗಳನ್ನು ಫ್ರೀ ರೇಂಜಿಂಗ್ ಪ್ರದೇಶದಲ್ಲಿ ಬಿಡಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಕುನೋ ರಾಷ್ಟ್ರೀಯ ಉದ್ಯಾನವನ, ಎರಡೂ ಚೀತಾಗಳು ಆರೋಗ್ಯವಾಗಿದ್ದು, ಮಾ.13 ರಂದು ಗಂಡು ಚೀತಾ ಒಬಾನ್ ಮತ್ತು ಹೆಣ್ಣು ಚೀತಾ ಆಶಾ, 24 ಗಂಟೆಗಳಲ್ಲಿ ಜಿಂಕೆಯೊಂದನ್ನು ಬೇಟೆಯಾಡಿತ್ತು.
ಇನ್ನು 24 ಗಂಟೆಯೊಳಗೆ ಎರಡೂ ಚಿರತೆಗಳು ಬೇಟೆಯಾಡಲು ಹೊರಟಿದ್ದು, ಎರಡೂ ಕಾಡಿನ ಪರಿಸರದಲ್ಲಿ ಹೊಂದಿಕೊಂಡಿವೆ ಎಂದು ಶಿಯೋಪುರ ಡಿಎಫ್ಒ ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.