ನವದೆಹಲಿ, ಮಾ 26 (DaijiworldNews/DB): ರಾಜಸ್ಥಾನ ಹಾಗೂ ಅರುಣಾಚಲ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಭೂಮಿ ಕಂಪಿಸಿದೆ. ಆದರೆ ಇದು ಕಡಿಮೆ ತೀವ್ರತೆಯ ಭೂಕಂಪ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ರಿಕ್ಟರ್ ಮಾಪಕದಲ್ಲಿ 4.2 ಮತ್ತು ಅರುಣಾಚಲ ಪ್ರದೇಶದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ (ಎನ್ಸಿಎಎಸ್) ಮಾಹಿತಿ ನೀಡಿದೆ.
ಅರುಣಾಚಲದ ಪ್ರದೇಶ ಚಾಂಗ್ಲಾಂಗ್ನಲ್ಲಿ 76 ಕಿ.ಮೀ. ಆಳದಲ್ಲಿ ಹಾಗೂ ರಾಜಸ್ಥಾನದ ಬಿಕಾನೇರ್ನಿಂದ ಪಶ್ಚಿಮಕ್ಕೆ 516 ಕಿ.ಮೀ. ದೂರದಲ್ಲಿ 8 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಎನ್ಸಿಎಎಸ್ ಹೇಳಿದೆ ಎಂಬುದಾಗಿ ವರದಿಯಾಗಿದೆ.