ನವದೆಹಲಿ, ಮಾ 26 (DaijiworldNews/HR): ದೇಶದ ಮೊತ್ತ ಮೊದಲ ಕೇಬಲ್ ರೀತಿಯಲ್ಲಿ ನಿರ್ಮಾಣವಾಗುತ್ತಿರುವ ಅಂಜಿ ಖಡ್ ರೈಲ್ವೇ ಸೇತುವೆ ನಿರ್ಮಾಣವಾಗುತ್ತಿದ್ದು, ಇದು ಮೇನಲ್ಲಿ ಮುಕ್ತಾಯವಾಗುವ ಸಾಧ್ಯತೆ ಇದೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಅಂಜಿ ಖಡ್ ರೈಲ್ವೇ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಉಧಂಪುರ-ಶ್ರೀನಗರ-ಬಾರಾಮುಲ್ಲಾ (ಯುಎಸ್ಬಿಆರ್ಎಲ್) ನಡುವಿನ ರೈಲು ಯೋಜನೆಯ ಅಂಗವಾಗಿ ಅದನ್ನು ಭಾರತೀಯ ರೈಲ್ವೇ ನಿರ್ಮಿಸುತ್ತಿದೆ.
ಇನ್ನು ದೇಶದಲ್ಲಿಯೇ ಮೊದಲ ಬಾರಿಗೆ ಕೇಬಲ್ ಶೈಲಿಯಲ್ಲಿ ಸೇತುವೆ ನಿರ್ಮಾಣವಾಗಿದ್ದು, ಟನೆಲ್ 2 ಮತ್ತು ಟನೆಲ್ 3ರ ಮೂಲಕ ಸೇತುವೆಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಇದು ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಇತರ ಭಾಗದ ಜತೆಗೆ ಸಂಪರ್ಕಿಸಲು ಇದು ಅನುಕೂಲವಾಗಲಿದೆ.