ಕೊಚ್ಚಿ, ಮಾ 27 (DaijiworldNews/MS): ಮಲಯಾಳಂ ಖ್ಯಾತ ನಟ, ಮಾಜಿ ಲೋಕಸಭಾ ಸದಸ್ಯ ಇನೋಸೆಂಟ್ ಅವರು ಮಾರ್ಚ್ 26ರ ಭಾನುವಾರ ನಿಧನರಾಗಿದ್ದಾರೆ. 75 ವರ್ಷದ ಇವರು ಅನಾರೋಗ್ಯಕ್ಕೀಡಾದ ಹಿನ್ನಲೆ ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿದ್ದರು.
ಇನೋಸೆಂಟ್ ಅವರಿಗೆ 2012ರಲ್ಲಿ ಕ್ಯಾನ್ಸರ್ ಕಾಯಿಲೆ ತಗುಲಿತ್ತು. 3 ವರ್ಷಗಳ ನಂತರದಲ್ಲಿ ಅವರು ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿ ಗೆದ್ದಿದ್ದರು.ಕೊರೊನಾ ಕಾಯಿಲೆಗೂ ತುತ್ತಾಗಿದ್ದ ಇವರು ಬಹು ಅಂಗಾಂಗ ವೈಫಲ್ಯಕ್ಕೀಡಾಗಿದ್ದರು ಎಂದು ಆಸ್ಪತ್ರೆ ವರದಿ ತಿಳಿಸಿದೆ.
ಇನೋಸೆಂಟ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ 2014ರ ಲೋಕಸಭೆ ಚುನಾವಣೆ (ಛಲಕ್ಕುಡಿ ಕ್ಷೇತ್ರ) ಗೆದ್ದಿದ್ದರು. 1948ರಲ್ಲಿ ಜನಿಸಿದ ಇನೋಸೆಂಟ್ ಅವರು 1972ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 4 ದಶಕಗಳ ಕಾಲ ನೂರಾರು ಸಿನಿಮಾದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿ ಮಿಂಚಿದ್ದರು. ಇನ್ನು ರಿಲೀಸ್ ಆಗಲಿರುವ ಫಾಹದ್ ಫಾಸಿಲ್ ಅವರ ʼಪಾಚುವುಂ ಅದ್ಭುತವಿಳಕ್ಕುಂʼ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.