ಚಿಕ್ಕಮಗಳೂರು, ಮಾ 27 (DaijiworldNews/HR): ಬಿಜೆಪಿಯ ಗುಂಪಿನ ಮಧ್ಯೆ ಭಿನ್ನಮತ ಭುಗಿಲೆದ್ದಿರುವ ಮೂಡಿಗೆರೆಯಲ್ಲಿ ಗಲಾಟೆ ನಡೆದಿರುವ ಘಟನೆ ನಡೆದಿದೆ.
ಪೊಲೀಸರೆದುರೇ ಶಾಸಕ ಎಂಪಿ. ಕುಮಾರಸ್ವಾಮಿ ಮತ್ತು ಎಂ.ಎಲ್.ಸಿ. ಪ್ರಾಣೇಶ್ ಬೆಂಬಲಿಗರು ಕೈ-ಕೈ ಮಿಲಾಯಿಸಿದ್ದಾರೆ. ಹಲವು ದಿನಗಳಿಂದ ಇದ್ದ ಅಸಮಾಧಾನ ಸ್ಫೋಟಗೊಂಡಿದೆ.
ಇನ್ನು ಆಟೋ ನಿಲ್ದಾಣದ ಬಳಿ ನೆರಳಿಗಾಗಿ ಎಂ.ಎಲ್.ಸಿ. ಫಂಡ್ ನಲ್ಲಿ ಶೆಡ್ ನಿರ್ಮಾಣಮಾಡಲಾಗಿದ್ದು, ಶೆಡ್ ತೆರವಿಗೆ ಪಟ್ಣಣ ಪಂಚಾಯತ್ ಮುಂದಾಗಿದ್ದು, ಈ ವೇಳೆ ಇಬ್ಬರು ನಾಯಕರ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ.