ಮಧ್ಯಪ್ರದೇಶ, ಮಾ 28 (DaijiworldNews/HR): ಬಾಲಿವುಡ್ ನಟಿ ತಾಪ್ಸಿ ಪನ್ನು ಅವರು ಸನಾತನ ಧರ್ಮದ ಚಿತ್ರಣವನ್ನು ಘಾಸಿಗೊಳಿಸಿದ್ದಾರೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಮಧ್ಯಪ್ರದೇಶದ ಇಂದೋರ್ನಲ್ಲಿ ದೂರು ದಾಖಲಾಗಿದೆ.
ಹಿಂದ್ ರಕ್ಷಕ ಸಂಘಟನೆಯ ಸಂಚಾಲಕ ಮತ್ತು ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರ ಏಕಲವ್ಯ ಸಿಂಗ್ ಗೌರ್ ಈ ದೂರು ದಾಖಲಿಸಿದ್ದು, ಈ ಸಂಬಂಧ ಇಂದೋರ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಇನ್ನು ಮಾರ್ಚ್ 14, 2023 ರಂದು ನಟಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಗೌರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ವಿಡಿಯೋದಲ್ಲಿ ತಾಪ್ಸಿ ಪನ್ನು ಫ್ಯಾಶನ್ ಶೋನಲ್ಲಿ ರಾಂಪ್ವಾಕ್ ಮಾಡುವಾಗ ಅಸಭ್ಯ ಡ್ರೆಸ್ ಧರಿಸಿದ್ದು, ಇದರೊಂದಿಗೆ ಅವರು ತನ್ನ ಕುತ್ತಿಗೆಯಲ್ಲಿ ಲಕ್ಷ್ಮಿ ಮಾತೆಯ ಲಾಕೆಟ್ ಅನ್ನು ಸಹ ಧರಿಸಿದ್ದರು. ಆ ಲಾಕೆಟ್ನೊಂದಿಗೆ ಬಹಿರಂಗವಾದ ಉಡುಪನ್ನು ಧರಿಸಿರುವುದು ತನ್ನ ಧಾರ್ಮಿಕ ಭಾವನೆಗಳು ಮತ್ತು ಸನಾತನ ಧರ್ಮದ ಚಿತ್ರಣವನ್ನು ಘಾಸಿಗೊಳಿಸಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.