ನವದೆಹಲಿ, ಮಾ 31 (DaijiworldNews/HR): ರಸ್ತೆ ಅಪಘಾತ ಪ್ರಕರಣದಲ್ಲಿ ಜೈಲು ಸೇರಿರುವ ಕ್ರಿಕೆಟಿಗ ಮತ್ತು ರಾಜಕಾರಣಿ ನವಜೋತ್ ಸಿಂಗ್ ಸಿಧು ಏಪ್ರಿಲ್ 1 ರಂದು ಪಟಿಯಾಲ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ ಎಂದು ಕಾರಾಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
1988ರ ರಸ್ತೆ ಕ್ರೋಧ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಿಧು ಅವರನ್ನು ದೋಷಿ ಎಂದು ಘೋಷಿಸಿದ ನಂತರ ಕಳೆದ ವರ್ಷ ಮೇ 20 ರಿಂದ ಸಿಧು ಜೈಲಿನಲ್ಲಿದ್ದು, ಸಿಧು ಅವರ ಸನ್ನಡತೆಗಾಗಿ ಅವರನ್ನು ಅಕಾಲಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಜೈಲಿನಲ್ಲಿ ಕರ್ತವ್ಯ ನಿರ್ವಹಿಸುವ ಮತ್ತು ಉತ್ತಮ ನಡವಳಿಕೆಯನ್ನು ಕಾಪಾಡಿಕೊಳ್ಳುವ ಅಪರಾಧಿಯು ಜೈಲಿನೊಳಗೆ ಕಳೆಯುವ ಪ್ರತಿ ತಿಂಗಳಿಗೆ ಐದು ದಿನಗಳ ವಿನಾಯಿತಿ ಪಡೆಯುತ್ತಾನೆ. ಮಾರ್ಚ್ 31 ರಂದು, ಸಿಧು 45 ದಿನಗಳ ವಿನಾಯಿತಿಗೆ ಅರ್ಹರಾಗಿರುತ್ತಾರೆ, ಇದು ಅವರ ಶೀಘ್ರ ಬಿಡುಗಡೆಗೆ ದಾರಿ ಮಾಡಿಕೊಡುತ್ತದೆ ಎನ್ನಲಾಗಿದೆ.