ಬೆಂಗಳೂರು, ಏ 01 (DaijiworldNews/HR): ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಕೊರೊನಾ ಪ್ರಭಾವದ ಶೈಕ್ಷಣಿಕ ವರ್ಷವೆಂದು ಪರಿಗಣಿಸಿ ಗ್ರೇಸ್ ಮಾರ್ಕ್ಸ್ ನೀಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿರುವುದಾಗಿ ವರದಿಯಾಗಿದೆ.
ಕೊರೊನಾದ ಪ್ರಭಾವದಿಂದ ಮಕ್ಕಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಕಾರಣ ಕೃಪಾಂಕ ನೀಡಲಾಗುತ್ತಿದ್ದು, ಒಟ್ಟಾರೆ ಕನಿಷ್ಠ ಅಂಕಗಳನ್ನುಗಳಿಸುವ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಶೇ.10 ಕೃಪಾಂಕ ನೀಡಿ ಉತ್ತೀರ್ಣಗೊಳಿಸಲಾಗುವುದು.
ಇನ್ನು ಎಸೆಸೆಲ್ಸಿಯ 6 ವಿಷಯಗಳ ಪೈಕಿ 3 ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೆ, ಉಳಿದ 3 ವಿಷಯಗಳಿಗೆ ತಲಾ ಶೇ. 10ರಷ್ಟು ಆದರೆ ಒಟ್ಟು 26 ಅಂಕ ಮೀರದಂತೆ ಕೃಪಾಂಕ ದೊರೆಯಲಿದೆ.
ಪ್ರಥಮ ಭಾಷೆಯಲ್ಲಿ ಗರಿಷ್ಠ 10 ಅಂಕ ಮತ್ತು ಉಳಿದ ವಿಷಯಗಳಲ್ಲಿ ಗರಿಷ್ಠ 8 ಅಂಕವನ್ನು ಕೃಪಾಂಕದ ರೂಪದಲ್ಲಿ ಪಡೆಯಬಹುದಾಗಿದೆ.
ಇನ್ನು ಕಳೆದ ವರ್ಷ ಕೂಡ ಶೇ.10 ಕೃಪಾಂಕಗಳನ್ನು ನೀಡಲಾಗಿದ್ದು, ಕೃಪಾಂಕದ ನೆರವಿನಿಂದ 40 ಸಾವಿರ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದರು.