ನವದೆಹಲಿ, ಏ 01(DaijiworldNews/HR): ಜನವರಿ 26 ಮತ್ತು ಫೆಬ್ರವರಿ 25 ರ ನಡುವೆ ಭಾರತದಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದ ನಗ್ನತೆಯನ್ನು ಉತ್ತೇಜಿಸುತ್ತಿದ್ದ 6,82,420 ಖಾತೆಗಳನ್ನು ನಿಷೇಧಿಸಿದೆ.
ಟ್ವಿಟರ್ ತನ್ನ ಮಾಸಿಕ ವರದಿಯಲ್ಲಿ ತನ್ನ ಕುಂದುಕೊರತೆ ಪರಿಹಾರ ಕಾರ್ಯ ವಿಧಾನಗಳ ಮೂಲಕ ಭಾರತದಲ್ಲಿನ ಬಳಕೆದಾರರಿಂದ 73 ದೂರುಗಳನ್ನು ಸ್ವೀಕರಿಸಿದ್ದು, ದೇಶಾದ್ಯಂತ ತನ್ನ ವೇದಿಕೆಯಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದ 1,548 ಖಾತೆಗಳನ್ನು ತೆಗೆದು ಹಾಕಲಾಗಿದೆ ಎಂದು ಕಂಪನಿ ಹೇಳಿದೆ.
ಇನ್ನು ಈ ವರದಿ ಮಾಡುವ ಅವಧಿಯಲ್ಲಿ ನಾವು ಟ್ವಿಟರ್ ಖಾತೆಗಳ ಕುರಿತು ಸಾಮಾನ್ಯ ಪ್ರಶ್ನೆಗಳಿಗೆ ಸಂಬಂಧಿಸಿದ 24 ವಿನಂತಿಗಳನ್ನು ಸಹ ಸ್ವೀಕರಿಸಿದ್ದೇವೆ ಎಂದು ಹೇಳಿದೆ.
ಏಪ್ರಿಲ್ 1 ರಿಂದ ಟ್ವಿಟರ್ ಎಲ್ಲಾ ಲೆಗಸಿ ಪರಿಶೀಲಿಸಿದ ನೀಲಿ ಚೆಕ್ ಗುರುತುಗಳನ್ನು ತೆಗೆದುಹಾಕಲು ಸಿದ್ಧವಾಗಿದೆ ಎಂದು ವರದಿಯಾಗಿದೆ.