ನವದೆಹಲಿ, ಮಾ (DaijiworldNews/HR): ಮಾರ್ಚ್ ತಿಂಗಳಲ್ಲಿ ಯುಪಿಐ ವಹಿವಾಟುಗಳು ಹೊಸ ದಾಖಲೆಯನ್ನು ನಿರ್ಮಿಸಿದ್ದು, ಯುಪಿಐ ವಹಿವಾಟು 14 ಲಕ್ಷ ಕೋಟಿ ರೂ. ದಾಟಿದೆ.
ಫೆಬ್ರವರಿಗೆ ಹೋಲಿಸಿದರೆ ಯುಪಿಐ ವಹಿವಾಟು ಶೇಕಡಾ 13 ರಷ್ಟು ಹೆಚ್ಚಾಗಿದೆ ಮತ್ತು ವ್ಯವಹಾರಗಳ ಸಂಖ್ಯೆ ಶೇಕಡಾ 18 ರಷ್ಟು ಹೆಚ್ಚಾಗಿದ್ದು, ಈ ಅವಧಿಯಲ್ಲಿ, ಯುಪಿಐ ವ್ಯವಹಾರಗಳ ಸಂಖ್ಯೆಯೂ 865 ಕೋಟಿ ರೂ.ಗಳ ಹೊಸ ಗರಿಷ್ಟ ಮಟ್ಟವನ್ನು ತಲುಪಿದೆ.
ಇನ್ನು ಕಳೆದ ವರ್ಷದ ಮಾರ್ಚ್ ಗೆ ಹೋಲಿಸಿದರೆ, ಡೀಲ್ ಗಳ ಸಂಖ್ಯೆ ಶೇಕಡಾ 60 ರಷ್ಟು ಮತ್ತು ಮೌಲ್ಯದ ದೃಷ್ಟಿಯಿಂದ ಶೇಕಡಾ 45 ರಷ್ಟು ಹೆಚ್ಚಾಗಿದೆ ಎನ್ನಲಾಗಿದೆ.
ಯುಪಿಐ ವಹಿವಾಟುಗಳನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವ ಮೂಲಕ ಮಾಡಲಾಗುತ್ತದೆ. ಈ ರೀತಿಯಾಗಿ ಮಾಡಿದ ವ್ಯವಹಾರಗಳ ಸಂಖ್ಯೆ ಶೇಕಡಾ 99.9 ಆಗಿದೆ.
ಈ ಕುರಿತು ಮಾಹಿತಿ ನೀಡಿರುವ ಎನ್ಪಿಸಿಐ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದಿಲೀಪ್ ಅಸ್ಬೆ, ಯುಪಿಐ ಪ್ಲಾಟ್ಫಾರ್ಮ್ ದಿನಕ್ಕೆ ಒಂದು ಬಿಲಿಯನ್ ವ್ಯವಹಾರಗಳನ್ನು ಪ್ರಕ್ರಿಯೆಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈಗ ಪ್ರತಿದಿನ ಸರಾಸರಿ ಮೂರು ಕೋಟಿ ವ್ಯವಹಾರಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.