ಬಿಹಾರ,ಮಾ24(AZM):ಇವಳೆಂಥಹಾ ತಾಯಿ ಆಗಿರಬಹುದು ನೋಡಿ, ತನ್ನಪುಟ್ಟ ಕಂದಮ್ಮ ಅಳುತ್ತಿದೆ ಎನ್ನುವ ಕಾರಣಕ್ಕಾಗಿ ಆ ಕಂದನ ಬಾಯಿಗೆ ಫೆವಿಕ್ವಿಕ್ ಗಮ್ ಅಂಟಿಸಿ ಬಾಯಿ ಮುಚ್ಚಿಸಿದ್ದಾಳೆ. ಇಂತಹ ಒಂದು ಘಟನೆ ಬಿಹಾರದ ಛಾಪ್ರಾದಲ್ಲಿ ನಡೆದಿದೆ.
ಮಗು ಜೋರಾಗಿ ಅಳುತ್ತಿದೆ ಎನ್ನುವ ಕಾರಣಕ್ಕಾಗಿ ಯಾರೇ ಒಬ್ಬಳು ತಾಯಿ ಇಂತಹ ನೀಚ ಕೃತ್ಯ ಮಾಡುತ್ತಾಳೋ? ಆದರೆ ಇಲ್ಲಿ ತಾಯಿತನಕ್ಕೇ ಕಳಂಕ ತರುವ ರೀತಿಯಲ್ಲಿ ತನ್ನ ಅಳುವ ಮಗುವಿನ ತುಟಿಗಳಿಗೆ ಗಮ್ ಹಚ್ಚಿಬಿಟ್ಟಿದ್ದಾಳೆ ಒಬ್ಬಳು ತಾಯಿ. ಆಕೆಯ ಪತಿಯೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಾನು ಏನೋ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದೆ. ವಾಪಸ್ ಬಂದು ಎಷ್ಟು ಹೊತ್ತಾದರೂ ಮಗು ಸುಮ್ಮನೇ ಇತ್ತು. ಹೋಗಿ ನೋಡಿದಾಗ ಅದರ ಬಾಯಿಯಿಂದ ಸಣ್ಣ ಪ್ರಮಾಣದಲ್ಲಿ ನೊರೆ ಬರುತ್ತಿತ್ತು. ಆತಂಕಗೊಂಡು ಪತ್ನಿ ಶೋಭಾ ಬಳಿ ಕೇಳಿದೆ. ಅದಕ್ಕೆ, ಮಗು ಯಾವಾಗಲೂ ಅಳುತ್ತಿತ್ತು. ಹಾಗಾಗಿ ಅದರ ತುಟಿಗಳಿಗೆ ಫೆವಿಕ್ವಿಕ್ ಹಚ್ಚಿದೆ. ಈಗ ಅಳುತ್ತಿಲ್ಲ ಎಂದು ಆಕೆ ಉತ್ತರಿಸಿದ್ದಾಗಿ ಮಗುವಿನ ತಂದೆ ಮಾಹಿತಿ ತಿಳಿಸಿದ್ದಾರೆ.
ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಮಗುವಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.