ಹೊಸದಿಲ್ಲಿ,ಮಾ25(AZM) : ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರ ಭಾವ ಚಿತ್ರವನ್ನು ಏರಿಂಡಿಯಾದ ಬೋರ್ಡಿಂಗ್ ಪಾಸ್ ನಲ್ಲಿ ಮುದ್ರಿತ ಮಾಡಿರುವುದು ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ.
ರೈಲ್ವೇ ಟಿಕೆಟ್ನಲ್ಲಿ ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಕೆಲವು ದಿನಗಳ ಹಿಂದೆ ಹಾಕಲಾಗಿದ್ದು, ಇದು ಕೂಡಾ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಏರಿಂಡಿಯಾದ ಬೋರ್ಡಿಂಗ್ ಪಾಸ್ನಲ್ಲಿ ಪ್ರಧಾನಿ ಮೋದಿ ಮತ್ತು ಗುಜರಾತ್ ಸಿಎಂ ರೂಪಾಣಿ ಅವರ ಫೋಟೋ ಕಂಡು ಬಂದಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದೆ. ಹಾಗಾಗಿ ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಏರ್ ಇಂಡಿಯಾ ಹೇಳಿದೆ.