ಬೆಂಗಳೂರು, ಮೇ 12 (DaijiworldNews/HR): ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಮುಂಚಿತವಾಗಿ ಇಂದು ಮಾಜಿ ಸಿಎಂ ಬಿಎಸ್ವೈ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರ ಮಹತ್ವದ ಸಭೆ ನಡೆಸಿದ್ದಾರೆ.
ಬೊಮ್ಮಾಯಿ ಅವರು ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಬೈರತಿ ಬಸವರಾಜ್, ಪಕ್ಷದ ಸಂಸದ ಲೆಹರ್ ಸಿಂಗ್ ಸಿರೋಯಾ ಮತ್ತು ಎಟಿ ರಾಮಸ್ವಾಮಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೊಂದಿಗೆ ಭೇಟಿ ಮಾಡಿದರು.
ಇನ್ನು ನಾವು ಸಂಪೂರ್ಣ ಬಹುಮತ ಪಡೆಯುತ್ತೇವೆ ಎಂಬುದು ನನ್ನ ನಿಲುವು ಒಂದೇ ಮತ್ತು ಸ್ಥಿರವಾಗಿದೆದ್ದು, ನಾವು ಎಲ್ಲಾ ಕ್ಷೇತ್ರಗಳು ಮತ್ತು ಜಿಲ್ಲೆಗಳಿಂದ ನಮ್ಮ ಗ್ರೌಂಡ್ ರಿಪೋರ್ಟ್ ಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.