ಮುಂಬೈ,ಮೇ13(DaijiworldNews/KH):ಇಂಟರ್ ನೆಟ್ ನಲ್ಲಿ ತನ್ನ ಅನುಮತಿಯಿಲ್ಲದೆ ನಕಲಿ ಜಾಹೀರಾತುಗಳಲ್ಲಿ ಪೋಟೋ, ಹೆಸರು, ಧ್ವನಿಯನ್ನು ಬಳಸಿ ವಂಚಿಸುತ್ತಿರುವವರ ವಿರುದ್ದ ಭಾರತದ ಕ್ರಿಕೆಟಿಗ, ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಬಳಿಕ ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿಯ ಸೆಕ್ಷನ್ 420, 465 ಮತ್ತು 500 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಮತ್ತು ತನಿಖೆಯನ್ನ ಪ್ರಾರಂಭಿಸಿದೆ.
ಸಚಿನ್ ತೆಂಡೂಲ್ಕರ್ ಅವರ ಟೀಂ ಫೇಸ್ಬುಕ್'ನಲ್ಲಿ ತೈಲ ಕಂಪನಿಯ ಜಾಹೀರಾತನ್ನು ಗಮನಿಸಿದ್ದು, ಜಾಹೀರಾತುದಾರರು ತಮ್ಮ ಪ್ರಚಾರಕ್ಕಾಗಿ ತೆಂಡೂಲ್ಕರ್ ಅವರ ಚಿತ್ರವನ್ನ ಒಪ್ಪಿಗೆ ಇಲ್ಲದೆ ಬಳಸಿದ್ದು, ಇದಲ್ಲದೇ ಲೆಜೆಂಡರಿ ಕ್ರಿಕೆಟಿಗ ತಮ್ಮ ಉತ್ಪನ್ನವನ್ನ ಶಿಫಾರಸು ಮಾಡಿದ್ದಾರೆ ಎಂದು ಹೇಳಿಕೊಂಡಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮುಂಬೈ ಪೊಲೀಸರ ಸೈಬರ್ ಸೆಲ್ ಪ್ರಕರಣ ದಾಖಲಿಸಿದೆ. ಇವುಗಳಲ್ಲಿ ವಂಚನೆ ಮತ್ತು ಫೋರ್ಜರಿಗೆ ಸಂಬಂಧಿಸಿದ ವಿಭಾಗಗಳು ಮತ್ತು ಐಟಿ ಕಾಯ್ದೆ ಸೇರಿವೆ.