ಪಶ್ಚಿಮ ಬಂಗಾಳ,ಮೇ15(DaijiworldNews/KH):ಕೋಲ್ಕತ್ತಾದ ಎಕ್ಬಾಲ್ಪೋರ್ ಪ್ರದೇಶದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇಝರ್ ಅಖ್ತರ್ ಎಂಬಾತ ಗೋಡೆಯೊಂದರ ಮೇಲೆ ಹಾಯ್ದು ಹೋಗಿರುವ ಲೋಹದ ತಂತಿಯಲ್ಲಿ ತನ್ನ ಒದ್ದೆ ಬಟ್ಟೆಯನ್ನು ಒಣಗಿಸಲು ಹೋಗಿದ್ದ ವೇಳೆ ತೂಗುಹಾಕಿದ್ದ ಲೋಹದ ತಂತಿಯ ಮೂಲಕ ವಿದ್ಯುತ್ ಹರಿದಿದೆ.
ಕೂಡಲೇ ಆತನನ್ನು ಉಳಿಸಲು ಆತನ ಪತ್ನಿ ಮುಂತಹಾ ಬೇಗಂ ಹಾಗೂ ಅತ್ತೆ ಖೈರುಲ್ ನೆಸ್ಸಾ ಸ್ಥಳಕ್ಕೆ ಬಂದರು, ಆದರೆ ಅವರಿಗೂ ವಿದ್ಯುತ್ ಶಾಕ್ ಹೊಡೆದಿತ್ತು, ಮೂವರನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇದರಲ್ಲಿ ಪತ್ನಿ ಹಾಗೂ ಅತ್ತೆ ಇಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಇಝರ್ ಅಖ್ತರ್ ಆಸ್ಪತ್ರೆಯಲ್ಲಿ ದಾಖಲಾಗಿ ಕೆಲ ಸಮಯದ ಬಳಿಕ ಮೃತಪಟ್ಟಿದ್ದಾರೆ.