ಬೆಂಗಳೂರು, ಮೇ 17 (DaijiworldNews/MS): ಬಿಳಿರಂಗನಬೆಟ್ಟ ಹಾಗೂ ಬಂಡೀಪುರ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆನೆ ಗಣತಿ ಕಾರ್ಯ ನಡೆಯಲಿದೆ.
ಮೊದಲ ದಿನ ನೇರ ಗಣತಿ, 2ನೇ ದಿನ ಆನೆ ಕಾರಿಡಾರ್ನಲ್ಲಿ ಹಾಕಿರುವ ಲದ್ದಿ ಪತ್ತೆಹಚ್ಚಿ ಲೆಕ್ಕ ಮತ್ತು ೩ನೇ ದಿನ ಅರಣ್ಯದ ಕೆರೆ-ಕಟ್ಟೆಗಳಿಗೆ ಬರುವ ಆನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.
ಬಿಆರ್ಟಿ ಹುಲಿ ರಕ್ಷಿತ ಪ್ರದೇಶವು 600ಕ್ಕೂ ಹೆಚ್ಚು ಚ ಕಿಮೀ. ವ್ಯಾಪ್ತಿ ಹೊಂದಿದ್ದು, ಗಣತಿಗೆ 150 ಮಂದಿ ಸಿಬ್ಬಂದಿ ನೇಮಿಸಲಾಗಿದೆ. ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ6 ಗಂಟೆವರೆಗೆ ಗಣತಿ ಕಾರ್ಯ ನಡೆಯಲಿದೆ. ಈ ಹಿಂದೆ 2017ರಲ್ಲಿ ಗಣತಿ ನಡೆದಿದ್ದು, 600ಕ್ಕೂ ಹೆಚ್ಚು ಆನೆಗಳನ್ನು ಅರಣ್ಯ ಇಲಾಖೆ ಗುರುತಿಸಿತ್ತು.