ನವದೆಹಲಿ, ಮೇ 18 (DaijiworldNews/MS): ತಮಿಳುನಾಡು ಮತ್ತು ಮಹಾರಾಷ್ಟ್ರದ ಸಾಂಪ್ರದಾಯಿಕ ಗೂಳಿ ಪಳಗಿಸುವ ಕ್ರೀಡೆ 'ಜಲ್ಲಿಕಟ್ಟು' ಮತ್ತುಎತ್ತಿನಗಾಡಿ ಓಟದ ಸ್ಪರ್ಧೆಗಳಿಗೆ ಅವಕಾಶ ನೀಡುವ ಕಾನೂನುಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ.
8 ಡಿಸೆಂಬರ್ 2022ರಂದು ಈ ವಿಷಯದ ವಿಚಾರಣೆಯನ್ನು ಪೂರ್ಣಗೊಳಿಸಿದ ನಂತರ ಸಂವಿಧಾನ ಪೀಠವು ತೀರ್ಪು ಕಾಯ್ದಿರಿಸಿತ್ತು. ಐದೂವರೆ ತಿಂಗಳ ನಂತರ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಈ ಬಗ್ಗೆ ಇಂದೇ ನಿರ್ಧಾರ ಹೊರಬರಲಿದೆ.
ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಜಲ್ಲಿಕಟ್ಟು ಕೇವಲ ಸಂಪ್ರಾದಾಯಿಕ ಆಚರಣೆಯಾಗಿದ್ದು,ಪ್ರಾಣಿಗಳನ್ನು ಹಿಂಸಿಸುವ ಯಾಉದೇ ಉದ್ದೇಶವಿಲ್ಲ, ಪೆರು, ಕೊಲಂಬಿಯಾ, ಸ್ಪೇನ್ ಸಹಿತ ಹಲವು ರಾಷ್ಟ್ರಗಳಲ್ಲೂ ಇಂಥ ಆಚರಣೆಗಳಿವೆ ಎಂದು ಸರ್ಕಾರ ವಾದಿಸಿತ್ತು.