ಬೆಂಗಳೂರು, ಮೇ 18 (DaijiworldNews/MS): ಸಿಎಂ ಘೋಷಣೆಯಾದ ಬಳಿಕ ಸಿದ್ದರಾಮಯ್ಯನವರು ಮೊದಲ ಬಾರಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. "ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ" ಎಂದು ಹೇಳಿದ್ದಾರೆ.
" ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ" ಎಂದು ಹೇಳಿದ್ದಾರೆ. ಈ ನಡುವೆ ಅವರು ಮಾಧ್ಯಮಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಡಿಕೆಶಿ ಟ್ವೀಟ್ ಮಾಡಿ, ಕರ್ನಾಟಕದ ಭವಿಷ್ಯದ ಭದ್ರತೆ ಹಾಗೂ ಜನರ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆಯಾಗಿರಲಿದೆ ಎಂದು ಹೇಳಿದ್ದಾರೆ.
ಒಟ್ಟಾರೆ ಇಬ್ಬರು ಖರ್ಗೆ ಅವರೊಂದಿಗೆ ಕೈ ಕೈ ಜೋಡಿಸಿರುವ ಒಂದೇ ಪೋಟೋ ಟ್ವೀಟ್ ಮಾಡಿ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ.