ನವದೆಹಲಿ, ಮೇ 19 (DaijiworldNews/MS): ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ದೊರೆತಿರುವ 'ಶಿವಲಿಂಗ' ಎಷ್ಟು ವರ್ಷ ಹಳೆಯದು ಎಂದು ತಿಳಿಯಲು ಕಾರ್ಬನ್ ಡೇಟಿಂಗ್ ಪರೀಕ್ಷೆ ಹಾಗೂ ವೈಜ್ಞಾನಿಕ ಸರ್ವೇಗೆ ಅಲಹಾಬಾದ್ ಹೈಕೋರ್ಟ್ನ ಆದೇಶ ಪ್ರಶ್ನಿಸಿ ಮುಸ್ಲಿಂ ಸಮುದಾಯದ ಪರ ಸಲ್ಲಿಕೆಯಾಗಿರುವ ಅರ್ಜಿಯ ತುರ್ತು ವಿಚಾರಣೆ ಶುಕ್ರವಾರ ನಡೆಯಲಿದೆ.
ಮಸೀದಿ ಪರವಾಗಿ ಉಸ್ತುವಾರಿ ಹೊತ್ತಿರುವ ಅಂಜುಮಾನ್ ಇಂತೆಝಾಮಿಯ ಮಸೀದಿ ವಾರಣಾಸಿ ಪರವಾಗಿ ಮುಖ್ಯ ನ್ಯಾಯಧೀಶ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಎದುರು ಹಾಜರಾದ ಹಿರಿಯ ವಕೀಲ ಹುಝೇಪ್ ಹ ಅಹ್ಮದಿ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ಎತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು. ನ್ಯಾಯಪೀಠ ಸಲ್ಲಿಕೆಯಾಗಿರುವ ಅರ್ಜಿಯನ್ನು ವಿಚಾರಣೆಗಾಗಿ ಅಂಗೀಕರಿಸಿರುವುದಾಗಿ ಹೇಳಿತು.