ನವದೆಹಲಿ,ಮೇ19(DaijiworldNews/KH):ದೇಶದಲ್ಲಿ ಎಂಟು ಹೊಸ ನಗರಗಳನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಚಿಂತಿಸುತ್ತಿದ್ದು ದೇಶದಲ್ಲಿ ಅಸ್ತಿತ್ವದಲ್ಲಿರುವ ನಗರಗಳ ಮೇಲಿನ ಜನಸಂಖ್ಯೆಯ ಹೊರೆಯನ್ನು ಕಡಿಮೆ ಮಾಡುವುದು ಇದರ ಮೂಲ ಉದ್ದೇಶ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗುರುವಾರ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಅರ್ಬನ್ 20 ಎಂಬ ಹೆಸರಿನ ಸಭೆಯಲ್ಲಿ ಇಲಾಖೆಯ ಜಿ 20 ಘಟಕದ ನಿರ್ದೇಶಕ ಎಂ.ಬಿ.ಸಿಂಗ್ ಈ ವಿಚಾರದ ಬಗ್ಗೆ ಮಾಹಿತಿ ನೀಡಿದರು. 15 ನೇ ಹಣಕಾಸು ಆಯೋಗದ ವರದಿಯು ದೇಶದಲ್ಲಿ ಹೊಸ ನಗರಗಳ ಅಭಿವೃದ್ಧಿಗೆ ಶಿಫಾರಸ್ಸಿನ ನಂತರ, 26 ರಾಜ್ಯಗಳಲ್ಲಿ ಹೊಸ ನಗರಗಳ ಅಭಿವೃದ್ಧಿ ಸ್ಥಾಪಿಸುವಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದು, ಈ ಎಂಟು ಹೊಸ ನಗರಗಳನ್ನು ವಿಂಗಡಿಸಿದ ನಂತರ ಚಿಂತನೆ ನಡೆಸಲಾಗುತ್ತಿದೆ ಎಂದರು.
ಇನ್ನೂ ಹೊಸ ನಗರಗಳನ್ನು ನಿರ್ಮಿಸುವ ಬಗ್ಗೆ ಸರ್ಕಾರವು ಸೂಕ್ತ ಸಮಯದಲ್ಲಿ ಘೋಷಣೆ ಮಾಡಲಿದೆ. ಆದ್ದರಿಂದ ನಗರಗಳು ನಾಗರಿಕರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ನಾವು ದೇಶದಲ್ಲಿ ಹೊಸ ನಗರಗಳನ್ನು ನಿರ್ಮಿಸಬೇಕಾದ ಅಗತ್ಯವಿದೆ ಎಂದರು.