ಬೆಂಗಳೂರು, ಮೇ 21 (DaijiworldNews/HR): ಬಿಜೆಪಿ ಆಡಳಿತ ಅವಧಿಯಲ್ಲಿನ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಬಳಿ ಹೇಳಿದ್ದಾರೆ ಎಂಬುವುದಾಗಿ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, ಪಿಎಸ್ಐ ಹಗರಣ, ನೀರಾವರಿ ಇಲಾಖೆ, ಗುತ್ತಿಗೆದಾರರ ಕೇಸ್, ಎಲ್ಲ ಕೇಸ್ಗಳ ತನಿಖೆ ಮಾಡಿಸುತ್ತೇವೆ. ಅಧಿಕಾರಿಗಳು, ಸಚಿವರೇ ಇರಲಿ ತನಿಖೆ ನಡೆಸಿ ಶಿಕ್ಷೆ ಕೊಡಿಸುತ್ತೇವೆ ಎಂದರು.
ಇನ್ನು ಎಲ್ಲೆಲ್ಲಿ ಭ್ರಷ್ಟಚಾರ ಆಗಿದೆ, ಅಕ್ರಮಗಳು ಆಗಿದೆ, ನೀರಾವರಿ, ಪಿಎಸ್ಐ ಸ್ಕ್ಯಾಮ್ ಸೇರಿದಂತೆ ಎಲ್ಲವನ್ನು ತನಿಖೆ ಮಾಡಿಸುತ್ತೇನೆ. ಯಾರು ತಪ್ಪಿತಸ್ಥರಿದ್ದಾರೆ ಅವರು ಅಧಿಕಾರಿಗಳಾಗಿರಲಿ, ಸಚಿವರಾಗಿರಲಿ ಯಾರೇ ಇರಲಿ ಅವರನ್ನು ಶಿಕ್ಷೆಗೆ ಒಳಪಡಿಸಿ ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು ಎಂದು ನನಗೆ ಹೇಳಿದ್ದಾರೆ ಎಂದು ತಿಳಿಸಿದರು.