ಬೆಂಗಳೂರು, ಮೇ 23 (DaijiworldNews/MS):ಸರ್ಕಾರ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನೀಡಿರುವ ಸೂಚನೆ ರೈತರ ಆತಂಕಕ್ಕೆ ಕಾರಣವಾಗಿದೆ.
ಕೃಷಿ ಪಂಪ್ಸೆಟ್ಗಳ ಆರ್ಆರ್ ನಂಬರ್ ಅನ್ನು ಆಧಾರ್ ಜತೆ ಜೋಡಣೆ ಮಾಡುವಂತೆ ಹೇಳಿರುವುದು ಮುಂದೆ ರೈತರ ಅನಾನುಕೂಲಕ್ಕೆ ಕಾರಣವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿದೆ.
ಯಾಕೆಂದರೆ ಈ ಸೂಚನೆ ಮುಂದೆ ಮುಂದಿನ ದಿನಗಳಲ್ಲಿ ಮೀಟರ್ ಅಳವಡಿಕೆಗೆ ಮುನ್ನುಡಿ ಆಗುವ ಜತೆಗೆ ಒಂದಕ್ಕಿಂತ ಹೆಚ್ಚು ಸಂಪರ್ಕ ಹೊಂದಿರುವವರಿಗೆ ಭಾರೀ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ.
ಪ್ರಸ್ತುತ ಯಾವುದೇ ಕೃಷಿ ಪಂಪ್ ಸೆಟ್ ಗಳಿಗೆಮೀಟರ್ ಇಲ್ಲ. ಕೆಲವು ಕಡೆ ಇದ್ದರೂ ಮೀಟರ್ ರೀಡಿಂಗ್ ಆಗುವುದಿಲ್ಲ. ಹೀಗಾಗಿ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಆಗುತ್ತಿದೆ ಎಂಬ ನಿಖರ ಲೆಕ್ಕವೂ ಇಲ್ಲ. ಒಂದಷ್ಟು ವರ್ಷಗಳ ಅಂಕಿ ಅಂಶ ನೋಡುವುದಾದರೆ ಒಟ್ಟಾರೆ ಬಳಕೆ ಶೇ. 34 ರಷ್ಟು ವಿದ್ಯುತ್ ಪಂಪ್ ಸೆಟ್ ಗಳಿಗೆ ಹೋಗುತ್ತಿದೆ
ಈಗ ಅದರ ಲೆಕ್ಕಹಾಕಿ ಆರು ತಿಂಗಳಲ್ಲಿ ಜೋಡಣೆ ಮಾಡದಿದ್ದರೆ ಅಂಥಹ ಗ್ರಾಹಕರ ಸಹಾಯಧನ ಬಿಡುಗಡೆ ಮಾಡದಂತೆ ಸೂಚಿಸಲಾಗಿದೆ. ಇದು ಒಂದಕ್ಕಿಂತ ಹೆಚ್ಚು ಸಂಪರ್ಕ ಹೊಂದಿದ ರೈತರನ್ನು ನೇರವಾಗಿ ಗುರಿ ಮಾಡಿದಂತಿದೆ. ಲಿಂಕ್ ನೆಪದಲ್ಲಿ ಬಹು ಸಂಪರ್ಕಗಳನ್ನು ಕಡಿತ ಮಾಡುವ ಸಾಧ್ಯತೆ ರೈತರನ್ನು ಚಿಂತೆಗೆ ನೂಕಿದೆ.