ನವದೆಹಲಿ, ಮೇ 23(DaijiworldNews/MS): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ರಕ್ ನಲ್ಲಿ ಪ್ರಯಾಣಿಸಿ, ಚಾಲಕರ ಸಮಸ್ಯೆ ಆಲಿಸಿದರು. ರಾಹುಲ್ ಸೋಮವಾರ ರಾತ್ರಿ ದೆಹಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದಾಗ ಹರಿಯಾಣದ ಮುರ್ತಾಲ್ನಿಂದ ಅಂಬಾಲಾಕ್ಕೆ ಟ್ರಕ್ನಲ್ಲಿ ಪ್ರಯಾಣಿಸಿದರು.
ಸಮಾಜದ ವಿವಿಧ ಸ್ತರಗಳ ಜನರನ್ನು ಭೇಟಿಯಾಗುತ್ತಿರುವ ಗಾಂಧಿ, ನಿನ್ನೆ ಚಾಲಕರೊಂದಿಗೆ ಮಾತನಾಡಿ ಅವರ ಸಂಕಷ್ಟಗಳನ್ನು, ಸಮಸ್ಯೆಗಳನ್ನು ಅರಿತುಕೊಂಡರು. ಹರ್ಯಾಣದ ಮುರ್ತಾಲ್ಗೆ ರಾತ್ರಿ 11 ಗಂಟೆ ಸುಮಾರಿಗೆ ಆಗಮಿಸಿದ ರಾಹುಲ್ ಮುರ್ತಾಲ್ನಿಂದ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಟ್ರಕ್ನಲ್ಲಿ ಪ್ರಯಾಣಿಸಿ ಅಂಬಾಲಾ ತಲುಪಿದರು. ಮುರ್ತಾಲ್ನಿಂದ ಅಂಬಾಲಾಗೆ ಪ್ರಯಾಣಿಸುವಾಗ, ಕಾಂಗ್ರೆಸ್ ನಾಯಕ ಟ್ರಕ್ ಚಾಲಕರೊಂದಿಗೆ ಅವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡಿದರು ಎಂದು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಜನ ನಾಯಕ ರಾಹುಲ್ ಗಾಂಧಿ ಅವರು, ಟ್ರಕ್ ಡ್ರೈವರ್ಗಳೊಂದಿಗೆ ತೆರಳಿ ಅವರ ಕಷ್ಟಗಳನ್ನು ಆಲಿಸಿದರು. ರಾಹುಲ್ ಗಾಂಧಿ
ಅವರ ಜತೆ ದೆಹಲಿಯಿಂದ ಚಂಡೀಗಢವರೆಗೂ ಪ್ರಯಾಣಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಭಾರತದಲ್ಲಿ ಸುಮಾರು 90 ಲಕ್ಷ ಟ್ರಕ್ ಚಾಲಕರಿದ್ದಾರೆ. ಅವರಿಗೆ ಅವರದೇ ಅದ ಕಷ್ಟಗಳಿವೆ. ಅವರ ಮನ್ಕೀ ಬಾತ್ ಕೇಳುವ ಕೆಲಸವನ್ನು ರಾಹುಲ್
ಗಾಂಧಿ ಮಾಡಿದ್ದಾರೆ" ಎಂದು ಬರೆದುಕೊಂಡಿದೆ.
ರಾಹುಲ್ ಗಾಂಧಿ ಟ್ರಕ್ನಲ್ಲಿ ಪ್ರಯಾಣಿಸುತ್ತಿರುವ, ಚಾಲಕರೊಂದಿಗೆ ಮಾತನಾಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ.