ತಿರುವನಂತಪುರಂ,ಮೇ23(DaijiworldNews/KH):ಐಸಿಸ್ ಸೇರಲು 2018ರಲ್ಲಿ ಕೇರಳವನ್ನು ತೊರೆದ ವ್ಯಕ್ತಿಯೊಬ್ಬ ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದಾನೆ.
ಜುಲ್ಫಿಕರ್ (48) ಮೃತಪಟ್ಟ ವ್ಯಕ್ತಿ, ಪಾಲಕ್ಕಾಡ್ ಜಿಲ್ಲೆಯ ಕಪೂರ್ನವನೆಂದು ಎಂದು ಗುರುತಿಸಲಾಗಿದೆ. ಈತ ಕೇರಳ ತೊರೆದಿದ್ದ ನಂತರ ಐಸಿಸ್ ಸೇರಲು ಅಬುಧಾಬಿ ಕೂಡ ತೊರೆದಿದ್ದಾನೆ ಎಂದು ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿದ್ದವು.ತದನಂತರ ಈತ ಇರಾನ್ಗೆ ತೆರಳಿದ್ದ ಆಮೇಲೆ ಪಾಕಿಸ್ತಾನಕ್ಕೆ ತಲುಪಿದ್ದ ಎಂದು ಮಾಹಿತಿ ಸಿಕ್ಕಿತ್ತು. ಆತ ಅಬುಧಾಬಿಯಿಂದ ನಾಪತ್ತೆಯಾಗಿದನ್ನು ಕಂಡು ಗುಪ್ತಚರ ಸಂಸ್ಥೆಗಳು ಆತನ ಮೇಲೆ ನಿಗಾ ಇರಿಸಿದ್ದವು. ಈಗ ಪಾಕ್ನಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ. ಪ್ರಕರಣದಲ್ಲಿ ನಿಗೂಢತೆ ಇದ್ದು, ಹೆಚ್ಚಿನ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
ಜುಲ್ಫಿಕರ್ ಸಾವಿನ ಬಗ್ಗೆ ಭಾರತಕ್ಕೆ ಮಾಹಿತಿ ಲಭಿಸಿದ್ದು ಇದರಿಂದ ಆತನ ಮೃತದೇಹವನ್ನು ಅಮೃತಸರದ ಎಫ್ಆರ್ಒ ಮೂಲಕ ಭಾರತ ಸರ್ಕಾರಕ್ಕೆ ಅಟ್ಟಾರಿ ಗಡಿಯಲ್ಲಿ ಹಸ್ತಾಂತರಿಸುವ ಬಗ್ಗೆ ಮಾಹಿತಿ ಇದೆ. ಬಳಿಕ ಪಾಲಕ್ಕಾಡ್ಗೆ ಕೊಂಡು ಹೋಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.
ಇನ್ನೂ ಇತನ ಮೃತದೇಹವನ್ನು ಸ್ವೀಕರಿಸಲು ಕುಟುಂಬಸ್ಥರು ಹಿಂದೆ ಸರಿಯುತ್ತಿದ್ದಾರೆ.