ನವದೆಹಲಿ,ಮೇ 23(DaijiworldNews/MS): ’ದೇಶದಲ್ಲಿ 1,000 ರೂ ಮುಖಬೆಲೆಯ ನೋಟುಗಳನ್ನು ಪರಿಚಯಿಸುವ ಯಾವುದೇ ಪ್ರಸ್ತಾಪವಿಲ್ಲ ’ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದ್ದಾರೆ.
2 ಸಾವಿರ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ಆರ್ಬಿಐನ ಕ್ಲೀನ್ ನೋಟ್ ನೀತಿಯ ಭಾಗವಾಗಿದೆ. 2000 ರೂಪಾಯಿ ಬೆಲೆಯ ನೋಟು ಹಿಂಪಡೆದ ನಿರ್ಧಾರದಿಂದ ದೇಶದ ಆರ್ಥಿಕತೆ ಮೇಲೆ “ಅತ್ಯಂತ ಕನಿಷ್ಠ ಪರಿಣಾಮ” ಬೀರುತ್ತದೆ. ಭಾರತೀಯ ಕರೆನ್ಸಿ ನಿರ್ವಹಣಾ ವ್ಯವಸ್ಥೆ ತುಂಬಾ ದೃಢವಾಗಿದೆ. 2,000 ರೂ ನೋಟುಗಳ ಪಾಲು ಚಲಾವಣೆಯಲ್ಲಿರುವ ನೋಟುಗಳಲ್ಲಿ ಕೇವಲ 10% ಕ್ಕಿಂತ ಹೆಚ್ಚು ಮತ್ತು ಅವುಗಳನ್ನುವಹಿವಾಟುಗಳಲ್ಲಿ ವ್ಯಾಪಕವಾಗಿ ಬಳಸಲಾಗಿಲ್ಲ ಎಂದು ಶಕ್ತಿಕಾಂತ್ ಹೇಳಿದ್ದಾರೆ.
2016ರ ನೋಟು ಅಮಾನ್ಯೀಕರಣದ ನಂತರ 1 ಸಾವಿರ ಬೆಲೆಯ ನೋಟು ಮರು ಪರಿಚಯ ಮಾಡುವ ಉದ್ದೇಶ ಇಲ್ಲ. ಸಾಮಾನ್ಯ ನಗದು ಠೇವಣಿ ನಿಯಮ ಅನುಸರಿಸಬೇಕು ಮತ್ತು ಠೇವಣಿ ನಿರ್ಣಯಿಸುವುದು ಇತರ ಏಜೆನ್ಸಿಗಳಿಗೆ ಬಿಟ್ಟದ್ದು ಎಂದು ಹೇಳಿದ ಅವರು ಬೇಡಿಕೆಯ ಟ್ರೆಂಡ್ಗಳ ಆಧಾರದ ಮೇಲೆ ಹೆಚ್ಚಿನ ಬ್ಯಾಂಕ್ಗಳು ತಮ್ಮ ಎಟಿಎಂಗಳನ್ನು ಮಾರ್ಪಡಿಸಿವೆ ಮತ್ತು 2000 ರೂಪಾಯಿಗಳ ನೋಟುಗಳನ್ನು ಹೆಚ್ಚು ನೀಡುತ್ತಿಲ್ಲ ಹೀಗಾಗಿ ಹಿಂಪಡೆಯಲಾಗಿದೆ ಎಂದಿದ್ದಾರೆ
2 ಸಾವಿರ ಮುಖಬೆಲೆಯ ಗರಿಷ್ಠ ನೋಟು ಚಲಾವಣೆ ಹಿಂಪಡೆದ ಹಿನ್ನೆಲೆಯಲ್ಲಿ ಇಂದಿನಿಂದ ಬ್ಯಾಂಕುಗಳಲ್ಲಿ ನೋಟುಗಳ ಬದಲಾವಣೆಗೆ ಆರಂಭವಾಗಿದೆ