ಕುನೋ,ಮೇ23(DaijiworldNews/KH):ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚೀತಾದ ನವಜಾತ ಮರಿ ಜ್ವಾಲಾ ಅನಾರೋಗ್ಯದಿಂದ ಸಾವನ್ನಪ್ಪಿದೆ.
ಮಾರ್ಚ್ 24ರಂದು ಕುನೋದಲ್ಲಿ ಹೆಣ್ಣು ಚಿರತೆ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು ಮೇಲ್ವಿಚಾರಣೆಯ ಸಂದರ್ಭದಲ್ಲಿ ಒಂದು ಮರಿಯು ಅನಾರೋಗ್ಯದಿಂದ ಬಳಲುತ್ತಿರುವುದು ಗೊತ್ತಾಗಿದೆ. ಅದು ಮಂಗಳವಾರ ಮೃತಪಟ್ಟಿದೆ.
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಎರಡು ತಿಂಗಳಲ್ಲಿ ಮೂರು ಚಿರತೆಗಳು ಸಾವನ್ನಪ್ಪಿದ್ದು, ಇದ್ದರಿಂದ ಕುನೊದಲ್ಲಿ ಚಿರತೆಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ, ಚೀತಾ ಯೋಜನೆಯ ಯಶಸ್ಸಿನ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ. ಇನ್ನು ಈ ಚಿರತೆಗಳ ಸಾವಿನ ಬಗ್ಗೆಯೂ ಅಧಿಕಾರಿಗಳು ಚಿಂತಿತರಾಗಿದ್ದಾರೆ. ಇದಕ್ಕೂ ಮುನ್ನ, ಚೀತಾ ಸಶಾ, ದಕ್ಷ ಮತ್ತು ಗಂಡು ಚಿರತೆ ಉದಯ್ ಸಾವನ್ನಪ್ಪಿವೆ. ಮೂರು ಚಿರತೆಗಳು ಮತ್ತು ಒಂದು ಮರಿಯ ಸಾವಿನ ನಂತರ, ಈಗ ಕುನೊದಲ್ಲಿ 17 ಚಿರತೆಗಳು ಮತ್ತು ಮೂರು ಮರಿಗಳು ಉಳಿದಿವೆ