ನವದೆಹಲಿ,ಮೇ24 (DaijiworldNews/KH):ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವುದನ್ನು ಬಹಿಷ್ಕರಿಸುವಂತೆ ಕಾಂಗ್ರೆಸ್ ನೀಡಿದ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಒಟ್ಟಾರೆ 19 ವಿರೋಧ ಪಕ್ಷಗಳು ಬಹಿಷ್ಕಾರನ್ನು ಘೋಷಿಸಿವೆ.
ಆರ್ಜೆಡಿ (ರಾಷ್ಟ್ರೀಯ ಜನತಾ ದಳ), ಡಿಎಂಕೆ, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಟಿಎಂಸಿ, ಸಿಪಿಐ ಮತ್ತು ಎಎಪಿ ಸೇರಿ ಬಿಜೆಪಿಯೇತರ 19 ಪಕ್ಷಗಳು ಬಹಿಷ್ಕಾರದ ನಿರ್ಧಾರ ಕೈಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನ ಉದ್ಘಾಟಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ, ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಉದ್ಘಾಟಿಸಬೇಕು ಎಂದು ಆರ್ ಜೆಡಿ ಮತ್ತು ಶಿವಸೇನೆ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ರಾಷ್ಟ್ರಪತಿ ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದು, ಅವರಿಗೆ ಸಂಸತ್ತಿನ ಅಧಿಕಾರವಿದೆ, ಆದರೂ ಸಹ ಪ್ರಧಾನ ಮಂತ್ರಿಗಳು ರಾಷ್ಟ್ರಪತಿಯವರನ್ನು ಬಿಟ್ಟು ಸಂಸತ್ ಉದ್ಘಾಟಿಸಲು ನಿರ್ಧರಿಸುವುದು ಸರಿಯಲ್ಲ ಎಂದಿದ್ದಾರೆ.
ಇಂತಹ ಅಮಾನವೀಯವಾದ ನಿರ್ಧಾರ ರಾಷ್ಟ್ರಪತಿಯವರ ಉನ್ನತ ಹುದ್ದೆಯನ್ನು ಅವಮಾನ ಮಾಡುತ್ತದೆ ಮತ್ತು ಸಂವಿಧಾನದಲ್ಲಿರುವ ನಿಯಮಗಳನ್ನು ಉಲ್ಲಂಘಿಸುತ್ತದೆ. ಮೂರು ಕೃಷಿ ಕಾನೂನುಗಳನ್ನು ಜಾರಿಗೊಳಿಸುವ ಅನೇಕ ವಿವಾದಾತ್ಮಕ ಶಾಸನಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ ಎಂದು ಪ್ರಧಾನಿ ವಿರುದ್ದ ಪತ್ರಿಕಾ ಹೇಳಿಕೆಯಲ್ಲಿ ಆರೋಪ ಮಾಡಿದ್ದಾರೆ.
ಇನ್ನೂ 19 ಪಕ್ಷಗಳು ನೂತನ ಸಂಸತ್ ಭವನ ಉದ್ಘಾಟನ ಸಮಾರಂಭಕ್ಕೆ ಗೈರು ಹಾಜರಾಗುವುದಾಗಿ ಹೇಳಿವೆ.