ಬೆಂಗಳೂರು, ಮೇ 24 (DaijiworldNews/HR): ಕೆಲ ಗ್ಯಾರಂಟಿಗಳಿಂದ ಏನೋ ಒಂದು ಅಚಾನಕ್ ಆರಿಸಿ ಬಂದಿದ್ದಾರೆ. ಗ್ಯಾರಂಟಿ ಮುಗಿದ ಬಳಿಕ ಮತ್ತೆ ಕೇಸರಿಯೆ ಬರುವುದು ಎಂದು ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕೇಸರೀಕರಣ ಮಾಡಲು ಹೊರಟಿದ್ದೀರಾ ಎಂದು ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನಿಸಿದ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಯತ್ನಾಳ್, ಡಿ.ಕೆ.ಶಿವಕುಮಾರ್ ಏನು ಪೊಲೀಸ್ ಠಾಣೆಗಳನ್ನು ಹಸುರೀಕರಣ ಮಾಡುತ್ತಾರಾ? ಏನು ಪಾಕಿಸ್ತಾನ ಮಾಡುತ್ತಾರಾ? ಅವೆಲ್ಲ ನಡೆಯುದಿಲ್ಲ. ಕೇಸರಿಕರಣ ಈ ದೇಶದ, ಧರ್ಮದ ಸಂಕೇತ ಇದೆ. ಕೇಸರಿ ಹಾಕಿಕೊಂಡರೆ ತಪ್ಪೇನಿದೆ. ಕೇಸರಿಕರಣ ವಿರೋಧ ಮಾಡುವವರ ಆಯುಷ್ಯ ಬಹಳ ದಿನ ಹೋಗುವುದಿಲ್ಲ ಎಂದರು.
ಇನ್ನು ಕೆಲ ಗ್ಯಾರಂಟಿಗಳಿಂದ ಏನೋ ಒಂದು ಅಚಾನಕ್ ಆರಿಸಿ ಬಂದಿದ್ದಾರೆ. ಗ್ಯಾರಂಟಿ ಮುಗಿದ ಬಳಿಕ ಮತ್ತೆ ಕೇಸರಿಯೆ ಬರುವುದು. 2024 ರಲ್ಲಿ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಮಂತ್ರಿ ಆಗುತ್ತಾರೆ. ಈ ದೇಶ ಹಿಂದುತ್ವ ಆಗುವುದೇ. ಇಂತಹ ನೂರು ಡಿ.ಕೆ.ಶಿವಕುಮಾರ್ ಬಂದರೂ ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.