ಗುವಾಹಟಿ, ಮೇ 25 (DaijiworldNews/SM): ಮಣಿಪುರದಲ್ಲಿ (Manipur) ಶಾಂತಿ ನೆಲೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಗುರುವಾರ ಮನವಿ ಮಾಡಿದ್ದು, ಶೀಘ್ರದಲ್ಲೇ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿ ಹಿಂಸಾಚಾರದಲ್ಲಿ ಭಾಗಿಯಾಗಿರುವ ಎರಡೂ ಸಮುದಾಯಗಳ ಜನರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
ನ್ಯಾಯಾಲಯದ ತೀರ್ಪಿನ ನಂತರ ಮಣಿಪುರದಲ್ಲಿ ಘರ್ಷಣೆಗಳು ನಡೆದಿವೆ. ನಾನು ಎರಡೂ ಗುಂಪುಗಳಿಗೆ ಮನವಿ ಮಾಡುತ್ತೇನೆ, ಅವರು ಶಾಂತಿಯನ್ನು ಕಾಪಾಡಬೇಕು. ಎಲ್ಲರಿಗೂ ನ್ಯಾಯ ಸಿಗುತ್ತದೆ. ಕೆಲವು ದಿನಗಳ ನಂತರ ನಾನೇ ಮಣಿಪುರಕ್ಕೆ ಹೋಗುತ್ತೇನೆ. ಮೂರು ದಿನಗಳ ಕಾಲ ಅಲ್ಲಿಯೇ ಇರುತ್ತೇನೆ. ಶಾಂತಿ ಸ್ಥಾಪನೆಗಾಗಿ ಮಣಿಪುರದ ಜನರೊಂದಿಗೆ ಮಾತನಾಡುತ್ತೇನೆ ಎಂದು ಅವರು ಗುವಾಹಟಿಯಲ್ಲಿ (Guwahati) ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.