ನವದೆಹಲಿ, ಮೇ 26(DaijiworldNews/MS): ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ವೇಳೆಗೆ ಮೂರು ರೀತಿಯ ವಂದೇ ಭಾರತ್ ರೈಲುಗಳು ಲಭ್ಯವಾಗಲಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ವಂದೇ ಚೇರ್ ಕಾರ್, ವಂದೇ ಮೆಟ್ರೋ, ವಂದೇ ಸ್ಲೀಪರ್ಸ್ ಹೀಗೆ ಮೂರು ಮಾದರಿ ಟ್ರೈನ್ ಲಭ್ಯವಾಗುವಂತೆ ಮಾಡಲಾಗುವುದು ಎಂದಿದ್ದಾರೆ.
ವಂದೇ ಮೆಟ್ರೋ 100 ಕಿಮೀ. ಅಂತರದಲ್ಲಿ, ವಂದೇ ಚೇರ್ ಕಾರ್ 100-500 ಕಿಮೀ. ಅಂತರದಲ್ಲಿ, ವಂದೇ ಸ್ಲೀಪರ್ ರೈಲುಗಳು 550 ಕಿಮೀ ವೇಗದಲ್ಲಿ ಸಂಚರಿಸಲಿವೆ ಎಂದು ವರದಿಯಾಗಿದೆ
ಶತಾಬ್ಧಿ, ರಾಜಧಾನಿ ಮತ್ತು ಇತರ ಎಕ್ಸ್ಪ್ರೆಸ್ ರೈಲುಗಳಿಗೆ ಪರ್ಯಾಯವಾಗಿ ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲುಗಳನ್ನು ರೈಲ್ವೇ ಇಲಾಖೆ ಪರಿಚಯಿಸಿದೆ. ಈ ರೈಲುಗಳು ಚೆನ್ನೈಯ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿವೆ.