ಅಮೃತಸರ, ಮೇ 28(DaijiworldNews/KH): ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿದ ಪಾಕಿಸ್ತಾನಿ ಡ್ರೋನ್ ಅನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ. 4 ದಿನದಲ್ಲಿ ನಡೆದ ಐದನೇ ಘಟನೆ ಇದಾಗಿದೆ.
ಪಂಜಾಬ್ನ ಅಮೃತಸರದ ಅಂತರಾಷ್ಟ್ರೀಯ ಗಡಿಯ ಬಳಿ ಮಾದಕ ದ್ರವ್ಯ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್ಎಫ್ ಹೊಡೆದುರುಳಿಸಿದೆ. ಬಿಒಪಿ ರಾಜತಾಲ್ ಪ್ರದೇಶದಲ್ಲಿ ಬಿಎಸ್ಎಫ್ನ 144 ಕಾರ್ಪ್ಸ್ನ ಪಡೆಗಳು ಕಾರ್ಯಾಚರಣೆ ನಡೆಸಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಹೆರಾಯಿನ್ ಎಂದು ಶಂಕಿಸಲಾದ 2 ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಜಯ್ ಕುಮಾರ್ ಮಿಶ್ರಾ, ಬಿಎಸ್ಎಫ್ ಕಮಾಂಡೆಂಟ್ ಹೇಳಿದರು.
ಅಮೃತಸರದಲ್ಲಿ ಮೇ 20ರಂದು ಡ್ರೋನ್ ಅನ್ನು ಹೊಡೆದುರುಳಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಅದರಲ್ಲಿ ಇದ ಶಂಕಿತ ಮಾದಕವಸ್ತುಗಳನ್ನು ಹೊಂದಿರುವ ಚೀಲವನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಕಳೆದ ವಾರ ಪಂಜಾಬ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ಅಧಿಕಾರಿಗಳು ನಾಲ್ಕು ಪಾಕಿಸ್ತಾನಿ ಡ್ರೋನ್ಗಳನ್ನು ತಡೆದು ಅವುಗಳಲ್ಲಿ ಮೂರನ್ನು ಹೊಡೆದುರುಳಿಸಿದ್ದಾರೆ.
ಮೊದಲ ಡ್ರೋನ್ “DJI ಮ್ಯಾಟ್ರಿಸ್ 300 RTK” ತಯಾರಿಕೆಯ ಕಪ್ಪು ಕ್ವಾಡ್ಕಾಪ್ಟರ್ ಆಗಿತ್ತು. ಎರಡನೆಯದು ಕೂಡ ಅದೇ ತಯಾರಿಕೆಯಾಗಿದ್ದು, ಅಮೃತಸರ ಜಿಲ್ಲೆಯ ರತ್ತನ್ ಖುರ್ದ್ ಗ್ರಾಮದಿಂದ ವಶಪಡಿಸಿಕೊಳ್ಳಲಾಗಿದೆ. ಮೂರನೇ ಡ್ರೋನ್ ಅನ್ನು ಹೊಡೆದುರುಳಿಸಲಾಯಿತು ಆದರೆ ಅದು ಪಾಕಿಸ್ತಾನದ ಕಡೆಯಿಂದ ಬಿದ್ದಿದೆ.