ಚಿಕ್ಕ ಮಗಳೂರು, ಮೇ 30 (DaijiworldNews/KH): ಸಿದ್ದರಾಮಯ್ಯ ಸುಲಭವಾಗಿ ಅಧಿಕಾರ ಬಿಡೋರು ಅಲ್ಲ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಯಾವ ಮಾತುಕತೆ ಆಗಿದೆ ಗೊತ್ತಿಲ್ಲ. ಈಗ ಹನಿಮೂನ್ ಪೀರಿಯಡ್, ನಾವು ಯಾಕೆ ಈಗಲೇ ಮಾತಾಡೋಣ ಎಂದು ಮಾಜಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರು ಅನುಭವದ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ತಾರೆ ಅಂದುಕೊಂಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಯಾರದ್ದೋ ಮಾತು ಕೇಳಿದ್ರೆ ಮತ್ತೆ ಮನೆಗೆ ಹೋಗ್ತಾರೆ ಎಂದು ಹೇಳಿದ್ದಾರೆ.
ಇನ್ನು ಉಚಿತ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಿದ ಸಿಟಿ ರವಿ, ಚುನಾವಣೆಗೆ ಮೊದಲು ಮಹದೇವಪ್ಪ ನಿನಗೂ ಫ್ರೀ, ನನಗೂ ಫ್ರೀ ಅಂದಿದ್ರು. ಉಚಿತ, ನಿಶ್ಚಿತ, ಖಂಡಿತ, ಖಚಿತ ಹೀಗೆ ಹೇಳಿದ್ರು. ಮೊದಲು ಯಾವುದೇ ಷರತ್ತುಗಳಿಲ್ಲ. ಈಗ ಎಲ್ಲಾ ಷರತ್ತು ಬಂದಿದೆ. ಇವರು ಲೋಕಸಭೆ ಚುನಾವಣೆವರೆಗೂ ಕೊಡಬಹುದು. ಏನು ಮಾಡ್ತಾರೆ ಅಂತ ಎಂದು ಕಿಡಿಕಾರಿದರು.
ನಾವೂ ಕೂಡ 36% ಮತಗಳನ್ನ ಪಡೆದಿದ್ದೇವೆ. ಕಡಿಮೆ ಸೀಟುಗಳು ಬಂದಿರಬಹುದು. ಮುಂದೆ ಏನಾಗುತ್ತೆ ನೋಡೋಣ. ಮಹದೇವಪ್ಪ, ಸಿದ್ದರಾಮಯ್ಯ, ಪಾಟೀಲ್ ಎಲ್ಲರೂ ಬಿಪಿಎಲ್ ಕಾರ್ಡ್ ಇರೋರಾ? ಅವರು ಮೊದಲೇ ಹೇಳಬೇಕಿತ್ತು ಇಂತವರಿಗೆ ಫ್ರೀ ಅಂತ. ಕಾಂಗ್ರೆಸ್ ಏನು ನಿನ್ನೆ ಮೊನ್ನೆ ಬಂದ ಪಕ್ಷವಾ.? ಸಿದ್ದರಾಮಯ್ಯ, ಮಹದೇವಪ್ಪ ಯಾರೂ ಟ್ಯಾಕ್ಸ್ ಕಟ್ಟೋದಿಲ್ವಾ ಎಂದು ಪ್ರಶ್ನಿಸಿದರು.
ಎನ್’ಇಪಿ ಕಿತ್ತಾಕ್ತೀವಿ ಅಂತ ಹೇಳ್ತಾರೆ. ನೈತಿಕ ಮೌಲ್ಯ ಶಿಕ್ಷಣ ಇವರಿಗೆ ಬೇಕಿಲ್ಲ. ಆಧುನಿಕ ಶಿಕ್ಷಣ ಇವರಿಗೆ ಬೇಕಿಲ್ಲ. ಒಂದು ಪೂರ್ವಾಗ್ರಹಕ್ಕೆ ಬಲಿಯಾಗಿದೆ. ಮಾತೃಭಾಷೆ,ಆಧುನಿಕ ಶಿಕ್ಷಣ ವಿರೋಧಿಸ್ತಿದ್ದಾರೆ. ಹೆಡ್ಗೆವಾರ್ ಅವರು RSS ಸಂಸ್ಥಾಪಕರು. ಅವರ ಬಗ್ಗೆ ಪಠ್ಯ ಇದೆ. ಅವರನ್ನ ವಿರೋಧಿಸಿ, ಪಠ್ಯದಿಂದ ಹೇಗೆ ತೆಗೆದರೆ ನೋಡೋಣ. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಎಂದು ಹೇಳಿದರು.
ಹಾಗೂ ನಾನು ಯಾವುದೇ ಹುದ್ದೆಯ ರೆಸ್ನಲ್ಲಿ ಇಲ್ಲ ಪಕ್ಷ ಕೊಟ್ಟಿರೋ ಜವಾಬ್ದಾರಿಯಲ್ಲಿ ಕೆಲಸ ಮಾಡ್ತೀನಿ. ಕಳೆದ ಬಾರಿಗಿಂತ 9 ಸಾವಿರ ಮತ ಪಡೆದು ಸೋತಿದ್ದೇನೆ. ಅತಿ ಹೆಚ್ಚು ಕೆಲಸ ಮಾಡಿದ್ದು ಈ ಬಾರಿ. ಆದ್ರೂ ಸೋತಿದ್ದೇನೆ. ನಾನು ಯಾವುದೇ ಅಧಿಕಾರಕ್ಕೆ ಬೇಡಿಕೆ ಇಟ್ಟಿಲ್ಲ. ಎಲ್ಲರನ್ನೂ ಜೋಡಿಸಿಕೊಂಡು ಕೆಲಸ ಮಾಡಬೇಕಾಗಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಿದೆ.
2047ಕ್ಕೆ ಭಾರತ ಅಭಿವೃದ್ಧಿಶೀಲ ರಾಷ್ಟ್ರ ಮಾಡಬೇಕು ಅಂತಿದೆ ಆದರೆ ಕೆಲ ಜಿಹಾದಿ ನಿಜವಾಗಿಯೂ ಮುಸ್ಲಿಂ ರಾಷ್ಟ್ರ ಮಾಡಲು ಹೊರಟಿದೆ ಪಕ್ಷ ಈಗ ಸೋತಿದೆ ಅಲ್ಲದೇ ಲೋಕಸಭೆ ಚುನಾವಣೆ ಹೊತ್ತಿಗೆ ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.