ಮುಂಬೈ, ಜೂನ್ 01 (DaijiworldNews/KH): ವಾಣಿಜ್ಯ ನಗರಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಲಾಗೇಜಿನಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಸಿರುವ ಘಟನೆ ವರದಿಯಾಗಿದೆ.
ವಿಮಾನ ನಿಲ್ದಾಣದಲ್ಲಿ ಮಹಿಳೆಯ ಲಗೇಜ್ ಸ್ಕ್ಯಾನ್ ಮಾಡುತ್ತಿದ್ದಾಗ ಬುಧವಾರ ಈ ಘಟನೆ ನಡೆದಿದೆ.
ಪೋಲೀಸರ ಪ್ರಕಾರ , ವಿಮಾನ ನಿಲ್ದಾಣದಲ್ಲಿ ಮಹಿಳೆಗೆ ತಾನು ಸಾಗಿಸುತ್ತಿದ್ದ ಹೆಚ್ಚುವರಿ ಕ್ಯಾಬಿನ್ ಲಗೇಜ್ಗೆ ಹಣ ಪಾವತಿಸುವಂತೆ ಕೇಳಲಾಗಿಯಿತ್ತು ಆದರೆ ಮಹಿಳೆ ಹಣ ಪಾವತಿ ಮಾಡಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ, ತನ್ನ ಲಗೇಜಿನಲ್ಲಿ ಬಾಂಬ್ ಅನ್ನು ಸಾಗಿಸುತ್ತಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾಳೆ .ಆನಂತರ ತಕ್ಷಣವೇ ಮಹಿಳೆಯನ್ನು ಅಧಿಕಾರಗಳು ವಶಕ್ಕೆ ಪಡೆದು ಆಕೆಯ ಲಗೇಜ್ ಅನ್ನು ಸ್ಕ್ಯಾನ್ ಮಾಡಿದ ನಂತರ ಅಧಿಕಾರಿಗಳಿಗೆ ಅದರಲ್ಲಿ ಏನೂ ಪತ್ತೆಯಾಗಲಿಲ್ಲ ಎಂಬುವುದು ತಿಳಿದು ಬಂದಿದೆ.
ಸದ್ಯ ಮಹಿಳೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 336 ಮತ್ತು ಸೆಕ್ಷನ್ 505 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮಹಿಳೆಯನ್ನು ಸ್ವಲ್ಪ ಸಮಯದವರೆಗೆ ಬಂಧಿಸಲಾಗಿದೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತ್ತು.