ಬೆಂಗಳೂರು, ಜೂ 02 (DaijiworldNews/MS): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯಲು ಮುಂದಾಗಿದೆ. ಮೊದಲ ಗ್ಯಾರಂಟಿ ಗೃಹಜ್ಯೋತಿ ಜಾರಿಗೆ ಸಂಪುಟ ಸಭೆ ನಿರ್ಧರಿಸಿದೆ. ಅದರಂತೆ ಎಲ್ಲರಿಗೂ 200 ಯುನಿಟ್ ವರೆಗೂ ಉಚಿತವಾಗಿ ವಿದ್ಯುತ್ ನೀಡಲಾಗುವುದು.
ಈ ಹಿಂದಿನ 12 ತಿಂಗಳ ವಿದ್ಯುತ್ ಬಿಲ್ ಯುನಿಟ್ ಬಳಕೆಯ ಸರಾಸರಿ ಆಧಾರದಲ್ಲಿ ವಿದ್ಯುತ್ ಬಿಲ್ ಪರಿಗಣೆ ಮಾಡಲಾಗುತ್ತದೆ. 12 ತಿಂಗಳಲ್ಲಿ ಎಷ್ಟು ಬಳಸುತ್ತಾರೋ ಅದರ ಸರಾಸರಿ ಪಡೆದುಕೊಂಡು 10% ಹೆಚ್ಚು ವಿದ್ಯುತ್ ನೀಡುತ್ತೇವೆ. 12 ತಿಂಗಳ ಆವರೇಜ್ ವಿದ್ಯುತ್ ಬಳಕೆ ಮೇಲೆ 10% ನೀಡುತ್ತೇವೆ. ಸರಾಸರಿ ಬಳಕೆಗೆ 10% ಸೇರಿಸಿ ಹೆಚ್ಚುವರಿ ವಿದ್ಯುತ್ ನೀಡುತ್ತೇವೆ ಎಂದಿದ್ದಾರೆ. 200 ಯೂನಿಟ್ ವಿದ್ಯುತ್ ಬಳಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಜುಲೈ 1ರಿಂದ ಆಗಸ್ಟ್ 1ರವರೆಗೆ ಬಳಸುವ ವಿದ್ಯುತ್ ಬಳಕೆಗೆ ಬಿಲ್ ಎಂದು ತಿಳಿಸಿದರು.
ಫ್ರೀ ವಿದ್ಯುತ್’ನ್ನು ದುರ್ಬಳಕೆ ಮಾಡದಂತೆ ಸರಕಾರ ಈ ಷರತ್ತು ವಿಧಿಸಿದೆ. ಒಂದೊಮ್ಮೆ 70 ಯುನಿಟ್ ಸರಾಸರಿಯಲ್ಲಿ ಹಿಂದಿನ 12 ತಿಂಗಳಲ್ಲಿ ವಿದ್ಯುತ್ ಬಳಸಿದ್ದಲ್ಲಿ, ಏಕಾಏಕಿ 150 ಯುನಿಟ್ ಬಳಸೋದಕ್ಕೆ ಅವಕಾಶವಿಲ್ಲ. 70 ಯುನಿಟ್'ಗೆ ಶೇ. 10 ಸೇರಿಸಿ ಹೆಚ್ಚುವರಿ ಬಳಸಬಹುದಾಗಿದೆ. ಇನ್ನು ಹೆಚ್ಚುವರಿ ಬಳಸುವ ಯುನಿಟ್ ಮೇಲೆ ಶುಲ್ಕ ವಿಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.