ನವದೆಹಲಿ, ಜೂ 08 (DaijiworldNews/MS): 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಆರ್ ಬಿಐ ಘೋಷಿಸಿದಾಗಿನಿಂದ, 500 ರೂಪಾಯಿಗಳ ನೋಟುಗಳ ಬಗ್ಗೆಯೂ ಸಾಕಷ್ಟು ವದಂತಿ ಇದ್ದು, 1000 ರೂಪಾಯಿ ನೋಟುಗಳನ್ನು ಮರು ಪರಿಚಯಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯೋಜನೆ ಹಾಕಿಕೊಂಡಿದೆ ಎಂಬ ಉಹಾಪೋಹ ಬಹಳ ದಟ್ಟವಾಗಿ ಕೇಳಿಬರುತ್ತಿದೆ. ಆದರೆ ಇಂತಹ ವದಂತಿಗಳಿಗೆ ಆರ್ಬಿಐ ಸ್ಪಷ್ಟನೆ ನೀಡಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಗುರುವಾರ (ಜೂನ್ 8) ಎಂಪಿಸಿ ನಂತರದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಜನರು ಕರೆನ್ಸಿ ನೋಟುಗಳನ್ನು ಹಿಂಪಡೆಯುವ ಅಥವಾ ಮರು ಪರಿಚಯಿಸುವ ಬಗ್ಗೆ ಊಹಾಪೋಹ ಹರಡಬಾರದು ಎಂದು ಹೇಳಿದರು.
500 ರೂಪಾಯಿ ನೋಟುಗಳನ್ನು ಹಿಂಪಡೆಯಲು ಅಥವಾ 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮರು ಪರಿಚಯಿಸಲು ಯೋಚಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.