ಬೆಂಗಳೂರು,ಜೂ 09 (DaijiworldNews/MS): ಇಬ್ಬರು ಸಚಿವರ ನಡುವೆ ಇದೀಗ ಜಿಲ್ಲಾ ಉಸ್ತುವಾರಿಗೆ ತೀವ್ರ ಪೈಪೋಟಿ ಶುರುವಾಗಿದ್ದು, ಕಾಂಗ್ರೆಸ್ ವರಿಷ್ಠರಿಗೆ ಮತ್ತೊಂದು ತಲೆನೋವು ಶುರುವಾಗಿದೆ.
ಧಾರವಾಡ ಜಿಲ್ಲೆಯಿಂದ ಸಂತೋಷ್ ಲಾಡ್ ಮಾತ್ರ ಸಚಿವರಾಗಿದ್ದರೂ, ಇದೀಗ ಪಕ್ಕದ ಜಿಲ್ಲೆಯ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಿಲ್ಲಾ ಉಸ್ತುವಾರಿಗೆ ಪೈಪೋಟಿ ನೀಡುತ್ತಿದ್ದಾರೆ. ಬೆಳಗಾವಿ ಜಿಲ್ಲೆ ಉಸ್ತುವಾರಿ ಸತೀಶ್ ಜಾರಕಿಹೊಳಿ ಪಾಲಾಗುವ ಸಾಧ್ಯತೆಯಿದೆ. ಹೀಗಾಗಿ, ಲಕ್ಷ್ಮಿ ಧಾರವಾಡ ಜಿಲ್ಲೆ ಉಸ್ತುವಾರಿಗೆ ತೀವ್ರ ಲಾಬಿ ನಡೆಸುತ್ತಿದ್ದಾರೆ.
ಸಚಿವ ಸ್ಥಾನ ನೀಡಿ ಸಮಾಧಾನದ ನಿಟ್ಟಿಸಿರು ಬಿಡುವ ಹೊತ್ತಿಗೆ ಕಾಂಗ್ರೆಸ್ ಪಕ್ಷಕ್ಕೆ ಉಸ್ತುವಾರಿಗಳ ನೇಮಕ ಕಗ್ಗಂಟಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಲಾಭಿ ಲಾಡ್ ಬೆಂಬಲಿಗರನ್ನು ಕೆರಳಿಸಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆ ಸ್ಥಳೀಯ ಸಚಿವರಿಗೇ ಉಸ್ತುವಾರಿ ನೀಡಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ.