ಹೊಸದಿಲ್ಲಿ, ಜೂ 09 (DaijiworldNews/SM) : ಎಐಎಡಿಎಂಕೆಯ ಮಾಜಿ ಸಂಸದ ಡಾ.ವಿ ಮೈತ್ರೇಯನ್ ಅವರು ಮಾತೃ ಪಕ್ಷಕ್ಕೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ನಾಯಕ ಅರುಣ್ ಸಿಂಗ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಸಮ್ಮುಖದಲ್ಲಿ ಡಾ.ವಿ ಮೈತ್ರೇಯನ್ ಬಿಜೆಪಿಗೆ ಸೇರ್ಪಡೆಗೊಂಡರು.
ಆರಂಭದಿಂದಲೂ ಮೈತ್ರೇಯನ್ ಅವರು RSS ಸದಸ್ಯರಾಗಿದ್ದರು. 1991 ರಲ್ಲಿಬಿಜೆಪಿ ತಮಿಳುನಾಡು ಘಟಕದ ಕಾರ್ಯಕಾರಿ ಸದಸ್ಯರಾಗಿದ್ದರು. 1995ರಿಂದ 1997 ರವರೆಗೆ ಬಿಜೆಪಿಯ ತಮಿಳುನಾಡು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, 1997 ರಿಂದ 1999 ರವರೆಗೆ ಉಪಾಧ್ಯಕ್ಷರಾಗಿ ಮತ್ತು 1999 ರಿಂದ 2000 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2000 ರಲ್ಲಿ ಅವರು ಬಿಜೆಪಿಗೆ ರಾಜೀನಾಮೆ ನೀಡಿ AIADMK ಗೆ ಸೇರಿದ್ದರು. 2022 ರಲ್ಲಿ ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿತರಾಗಿದ್ದರು. ಇದೀಗ ಮತ್ತೆ ಮಾತೃ ಪಕ್ಷ ಬಿಜೆಪಿಗೆ ಸೇರ್ಪಡೆಯಾಗಿರುವ ಮೈತ್ರೇಯನ್ ಅವರು, 2024 ಮತ್ತು 2026ರಲ್ಲಿ ತಮಿಳುನಾಡಿನಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ನಡೆಯಲಿದ್ದು ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.