ಕಂಪ್ಲಿ, ಜೂ 10 (DaijiworldNews/MS): ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದಲ್ಲಿ ಜೂ.10 ರ ಶುಕ್ರವಾರ ನಡೆದಿದೆ.
ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿಗಳ ಪುತ್ರಿ ಪ್ರಿಯದರ್ಶಿನಿ ಮೃತಪಟ್ಟ ಮಗುವಾಗಿದೆ. ಈ ದಂಪತಿಗೆ ವಿವಾಹವಾಗಿ 10 ವರ್ಷಗಳ ನಂತರ ಮಗು ಜನಿಸಿತ್ತು.
ಒಂಭತ್ತು ತಿಂಗಳ ಮಗು ಶುಕ್ರವಾರ ಆಟವಾಡುತ್ತ ಮನೆಯಲ್ಲಿನ ಮೆಂಥೋಪ್ಲಸ್ ಚಿಕ್ಕಡಬ್ಬಿ ನುಂಗಿದೆ,ನಂತರ ಮಗುವಿಗೆ ಉಸಿರಾಟ ತೊಂದರೆ ಹೆಚ್ಚಿದಾಗ ಖಾಸಗಿ ವೈದ್ಯರ ಬಳಿ ಪೋಷಕರು ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಮಗು ಮಾರ್ಗ ಮಧ್ಯೆಯೇ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.