ಬೆಂಗಳೂರು, ಜೂ 11 (DaijiworldNews/HR): 2024ರ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕೈಜೋಡಿಸುತ್ತಿವೆ. ಅವರು ಕೈಜೋಡಿಸಲಿ, ಆದರೆ ಕಾಂಗ್ರೆಸ್ ಪಕ್ಷವು ಉತ್ತಮ ಸಂಖ್ಯೆಯನ್ನು ಹೊಂದಿರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕರ್ನಾಟಕದ ಐದು ಗ್ಯಾರಂಟಿಗಳು ಇತರ ರಾಜ್ಯಗಳಲ್ಲಿ ಅವರ ಆಯಾ ಆರ್ಥಿಕ ಬಲವನ್ನು ಅವಲಂಬಿಸಿ ಪಕ್ಷಕ್ಕೆ ಒಂದು ಮಾದರಿಯಾಗಬಹುದು ಎಂದರು.
ಇನ್ನು ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡುವ ಮೂಲಕ ಸರ್ಕಾರಗಳು ದೊಡ್ಡ ಉದ್ಯಮಗಳಿಗೆ ಸಹಾಯ ಮಾಡುತ್ತವೆ, ಆದರೆ ಸಾಮಾನ್ಯ ಜನರಿಗೆ ಹೇಗೆ ಸಹಾಯ ಮಾಡುವುದು? ಹಾಗಾಗಿ ನಾವು ಗ್ಯಾರಂಟಿಗಳನ್ನು ನಿರ್ಧರಿಸಿದ್ದೇವೆ ಎಂದಿದ್ದಾರೆ,
ಆರ್ಥಿಕ ಸಮಸ್ಯೆಗಳು, ನಿರುದ್ಯೋಗ ಮತ್ತು ಬಡತನವು ಮುಖ್ಯ ವಿಷಯಗಳಾಗಿವೆ, ಸೈದ್ಧಾಂತಿಕ ವಿಷಯಗಳಲ್ಲ,ಅವುಗಳು ಹೊಟ್ಟೆ ತುಂಬುವುದಿಲ್ಲ ಎಂದು ಹೇಳಿದ್ದಾರೆ.