ಬೆಂಗಳೂರು, ಜೂ 12 (DaijiworldNews/MS):ಬೆಂಗಳೂರನ್ನ ಸುತ್ತಾಡಲು ಬಂದಿದ್ದ ನೆದರ್ಲೆಂಡ್ ಮೂಲದ ಖ್ಯಾತ ಯೂಟ್ಯೂಬರ್ ಪೆಡ್ರೋ ಮೋಟಾ ಎಂಬವರಿಗೆ ಸ್ಥಳೀಯ ವ್ಯಾಪಾರಿಯೊಬ್ಬರು ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಸಂಡೇ ಬಜಾರ್ ನಲ್ಲಿ ನಡೆದಿದೆ.
ಬೆಂಗಳೂರು ನಗರದ ಚಿಕ್ಕಪಟೇಟೆಯಲ್ಲಿ ವ್ಯಾಪ್ತಿಯಲ್ಲಿ ನಡೆಯುವ ಸಂಡೇಬಜಾರ್ ನಲ್ಲಿ ಈ ಘಟನೆ ನಡೆದಿದ್ದು, ತನ್ನ ಪಾಡಿಗೇ ವಿಡಿಯೋ ವ್ಲಾಗ್ ಮಾಡುತ್ತಿದ್ದ ನಡೆದು ಹೋಗುತ್ತಾ " ತಾನು ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ಏನಾದರೂ ಖರೀದಿ ಮಾಡಿತ್ತೇನೆ" ಎಂದು ಹೇಳುವಾಗಲೇ ಸ್ಥಳೀಯ ವ್ಯಾಪಾರಿಯೋರ್ವ ಪೆಡ್ರೋ ಕೈ ಹಿಡಿದು ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಅಗ್ರಹಿಸಿ ಅನುಚಿತವಾಗಿ ವರ್ತಿಸಿದ್ದಾನೆ.
ಆದರೆ ಆತನ ಮಾತು ಅರ್ಥವಾಗದ ವಿದೇಶಿ ಯೂಟ್ಯೂಬರ್ ಪೆಡ್ರೋ ಅಲ್ಲಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಆದರೂ ಆತನನ್ನು ಆ ವ್ಯಾಪಾರಿ ಮತ್ತು ಇತರರು ಅಟ್ಟಾಡಿಸಿದ್ದಾರೆ. ಕೆಲವೇ ಕ್ಷಣಗಳ ಅಂತರದಲ್ಲಿ ವಿದೇಶಿ ಯೂಟ್ಯೂಬರ್ ಪಾರಾಗಿದ್ದಾನೆ. ಈ ವಿಡಿಯೋ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಅವರು ಅದನ್ನು ತಮ್ಮ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಚಿಕ್ಕಪೇಟೆಯಲ್ಲಿ ನಡೆದ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ತಕ್ಷಣ ವೈರಲ್ ಆದ ವಿಡಿಯೋ ಪ್ರಕರಣವನ್ನು ಡಿಸಿಪಿ ಗಮನಕ್ಕೆ ಸ್ಥಳೀಯರು ತಂದಿದ್ದಾರೆ.
ಕಾಟನ್ ಪೇಟೆ ಠಾಣಾ ಪೊಲೀಸರು ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ನವಾಬ್ ಹಯಾತ್ ಶರೀಫ್ ಎಂಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.