ಬೆಂಗಳೂರು, ಜೂ 16 (DaijiworldNews/MS):ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿ ಸಚಿವ ಸಂಪುಟ, ಉಸ್ತುವಾರಿ ಸಚಿವರಗಳ ನೇಮಕ ಎಲ್ಲಾ ಮುಗಿಸಿ ಸದ್ಯಬಜೆಟ್ ಅಧಿವೇಶನಕ್ಕೆ ತಯಾರಿ ನಡೆಸುತ್ತಿದೆ. ಇದರೊಂದಿಗೆ ಗ್ಯಾರಂಟಿ ಯೋಜನೆಗಳ ಅನುಷ್ಟಾನವೂ ಜಾರಿಯಾಗುತ್ತಿದೆ.
ಆದರೆ ಇತ್ತ ಕಡೆ ಬಿಜೆಪಿಗೆ ಮಾತ್ರ ಈವರೆಗೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಒಂದು ತಿಂಗಳು ಕಳೆದರೂ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಈ ವಿಚಾರವಾಗಿ ಪಕ್ಷದ ಕಾರ್ಯಕರ್ತರು ಅಸಮಧಾನಗೊಂಡಿದ್ದಾರೆ.
ಜುಲೈ 3 ರಿಂದ ಬಜೆಟ್ ಅಧಿವೇಶನ ನಡೆಸಲು ಸಿಎಂ ಸಿದ್ದರಾಮಯ್ಯನವರು ಸಿದ್ಧತೆ ನಡೆಸಿದ್ದಾರೆ.ಅಷ್ಟರೊಳಗೆ ವಿಪಕ್ಷ ನಾಯಕನ ಆಗಬೇಕಿದೆ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸುನೀಲ್ ಕುಮಾರ್ ಹಾಗೂ ಅರವಿಂದ್ ಬೆಲ್ಲದ್ ಅವರ ಹೆಸರು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮುಂಚೂಣಿಯಲ್ಲಿವೆ.
ಆದರೂ ಪಾತಾಳಕ್ಕೆ ಕುಸಿದ ಇಮೇಜ್ ವೃದ್ಧಿ ಹಾಗೂ ಭವಿಷ್ಯದಲ್ಲಿ ಪಕ್ಷದ ಪುನರುತ್ಥಾನ ದೃಷ್ಟಿಯಿಂದ ವಿಪಕ್ಷ ನಾಯಕನ ಸ್ಥಾನಕ್ಕೆ ಸಮರ್ಥರನ್ನು ನೇಮಕ ಮಾಡುವುದು ಅನಿವಾರ್ಯವಾಗಿದೆ.