ವಾಧ್ರಾ ,ಏ 1 (MSP): ’ಕಾಂಗ್ರೆಸ್ ಪಕ್ಷ ಹಿಂದೂಗಳನ್ನ ಅವಮಾನಿಸಿದೆ. ಇದಕ್ಕೆ ಕ್ಷಮೆಯೇ ಇಲ್ಲ ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಇಂದು ಮಹಾರಾಷ್ಟ್ರದ ವಾರ್ಧಾ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಜಗತ್ತನ್ನೇ ತನ್ನ ಪರಿವಾರ ಎಂದು ಭಾವಿಸುವ ಹಿಂದೂ ಸಮಾಜವನ್ನು ಕಾಂಗ್ರೆಸಿಗರು ಭಯೋತ್ಪಾದಕರು ಎಂದರು. ಹಿಂದೂ ಭಯೋತ್ಪಾದನೆ ಎಂಬ ಪದ ಬಳಸಿ ಕಾಂಗ್ರೆಸ್ ಹಿಂದುಗಳಿಗೆ ಅವಮಾನ ಮಾಡಿದರು. ಈ ಕಾರಣದಿಂದ ಅವರಿಗೆ ಈಗ ಚುನಾವಣೆ ಗೆಲ್ಲುವ ಧೈರ್ಯ ಇಲ್ಲ ಎಂದು ಮೋದಿ ಹರಿಹಾಯ್ದರು.
ರಾಹುಲ್ ಗಾಂಧಿ ಕೇರಳದ ವಯನಾಡ್ನಿಂದ ಕಣಕ್ಕಿಳಿದಿದ್ದಾರೆ. ಹಿಂದೂಗಳು ಜಾಸ್ತಿ ಇರುವ ಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿಯಲು ಕಾಂಗ್ರೆಸ್ಗೆ ಭಯವಿದೆ. ಭಯೋತ್ಪಾದನೆಯಲ್ಲಿ ಹಿಂದೂಗಳು ತೊಡಗಿರುವ ಯಾವ ಘಟನೆಯೂ ಇತಿಹಾಸದಲ್ಲಿಲ್ಲ. ಆದರೂ ಹಿಂದೂ ಭಯೋತ್ಪಾದನೆ ಎಂದು ಕಾಂಗ್ರೆಸ್ಸಿಗರು ಟೀಕಿಸುತ್ತಾರೆ. ಇದನ್ನು ದೇಶದ ಜನರು ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು.
ನಿಮಗೆ ಯಾರು ಬೇಕು? ದೇಶದ್ ಹೀರೊಗಳು ಬೇಕೋ? ಪಾಕಿಸ್ತಾನದಲ್ಲಿ ಹೀರೊ ಆದವರು ಬೇಕೋ? ಎಂದು ಪ್ರಶ್ನಿಸಿದ ಅವರು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್ಸಿಪಿ ಮೈತ್ರಿ ಕುಂಭಕರ್ಣನಂತೆ ಮಲಗಿದೆ ಎಂದರು.
ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರೊಬ್ಬರು ಮೋದಿ ಶೌಚಾಲಯಗಳ ಚೌಕಿದಾರ ಎಂದು ಟೀಕಿಸಿದ್ದಾರೆ. ಆದ್ರೆ ಇದನ್ನು ನಾನು ಹೊಗಳಿಕೆಯಂತೆ ಪರಿಗಣಿಸುತ್ತೇನೆ. ಚೌಕಿದಾರನಿರುವವರೆಗೆ ದೇಶದಲ್ಲಿ ಮಹಿಳೆಯರಿಗೂ ನೆಮ್ಮದಿ ಇದೆ ಎಂದು ಪ್ರತ್ಯುತ್ತರ ನೀಡಿದರು.