ಬೆಂಗಳೂರು, ಏ 1 (MSP) : ಬೆಂಗಳೂರಿನ ಹೊರವಲಯದ ಮಾದಾವರದಲ್ಲಿ ಭಾನುವಾರ ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟದ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಬಿಜೆಪಿಗೆ ಸೆಡ್ಡು ಹೊಡೆಯಲೆಂದು ಆಯೋಜಿಸಿದ ಬೃಹತ್ ರ್ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ , ಮಾಜಿ ಸಿಂ ಸಿದ್ದರಾಮಯ್ಯ , ಮಲ್ಲಿಕಾರ್ಜುನ ಖರ್ಗೆ ಮುಂತಾದ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು.
ದರೆ ಈ ರ್ಯಾಲಿ ಯ ಬ್ಯಾನರ್ ಇದೀಗ ಚರ್ಚೆಯ ವಿಚಾರವಾಗಿದೆ. ಯಾಕೆಂದರೆ ವೇದಿಕೆಯ ಹಿಂಭಾಗ ಅಳವಡಿಸಿದ್ದ ಬ್ಯಾನರ್ ನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಎಂಬ ಬದಲಾಗಿ ಕರ್ನಾಟಾಟಾ ಎಂದು ಬರೆಯಲಾಗಿದೆ. ಆದರೆ ನಿಜಕ್ಕೂ ಬ್ಯಾನರ್ ನಲ್ಲಿ ಅಕ್ಷರ ದೋಷ ಕಾಣಿಸಿಕೊಂಡು ಕರ್ನಾಟಕದ ಬದಲು ಕರ್ನಾಟಾಟಾ ಎಂದು ಬರೆಯಲಾಗಿದೆಯೋ ಇನ್ಯಾರೋ ಇದನ್ನು ಕರ್ನಾಟಕ ಶಬ್ದವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿಯಬಿಟ್ಟಿದ್ದಾರೋ ಎಂದು ತಿಳಿದುಬಂದಿಲ್ಲ.
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿಯೂ ಕರ್ನಾ ’ಟಾಟಾ ’ ಈಗ ಚರ್ಚೆಯ ವಿಚಾರವಾಗಿದೆ.