ಬೆಂಗಳೂರು,ಜೂ 17 (DaijiworldNews/MS): ಉಚಿತ ವಿದ್ಯುತ್ ನೀಡಲು ಮುಂದಾಗಿರುವ ಸರ್ಕಾರ ಇದೀಗ ಸೋಲಾರ್ ಸಬ್ಸಿಡಿ ರದ್ದುಪಡಿಸಿದೆ.
ಸೋಲಾರ್ ಬಳಸುತ್ತಿದ್ದ ಗ್ರಾಹಕರಿಗೆ ಪ್ರತಿ ತಿಂಗಳು ನೀಡುತ್ತಿದ್ದ ಸಬ್ಸಿಡಿ ರದ್ದುಗೊಳಿಸಿ KERC ಆದೇಶ ಹೊರಡಿಸಿದೆ. ಅದರಂತೆ 2007ರಿಂದ ಸೋಲಾರ್ ಬಳಕೆಗೆ ಉತ್ತೇಜನ ನೀಡಲು ಪ್ರತಿ ಯೂನಿಟ್ಗೆ 50 ಪೈಸೆಯಂತೆ(ಗರಿಷ್ಠ 50ರೂ.) ನೀಡುತ್ತಿದ್ದ ಸಬ್ಸಿಡಿ ರದ್ದುಪಡಿಸಲಾಗಿದೆ. ಬ್ಯಾಂಕ್ ಮೂಲಕ ಆಟೋಮೆಟಿಕ್ ಬಿಲ್ ಪಾವತಿ ಮಾಡುವಾಗ ನೀಡುತ್ತಿದ್ದ 0.25% ರಿಯಾಯಿತಿ ಸೌಲಭ್ಯವನ್ನು ಕೂಡ ರದ್ದುಗೊಳಿಸಿದೆ.
ರಾಜ್ಯದ ಜನರು ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯ ಖುಷಿಯಲ್ಲಿದ್ದಾಗಲೇ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್ ಸಿ) ವಿದ್ಯುತ್ ಶುಲ್ಕವನ್ನು ಶೇ. 8ರಷ್ಟು (ಅಂದರೆ, ಯೂನಿಟ್ ಗೆ ಸುಮಾರು 70 ಪೈಸೆ) ಹೆಚ್ಚಿಸಿ ಬೆಚ್ಚಿಬೀಳಿಸಿತ್ತು. ಇದೀಗ ಒಂದೊಂದಾಗಿಯೇ ರದ್ದಾಗುತ್ತಿರುವುದು ನೋಡಿದ್ರ ಉಚಿತ ಸಿಗದೆ ಬಿಲ್ ಕಟ್ಟುವ ಜನರ ಜೇಬಿಗೆ ದೊಡ್ಡ ಕತ್ತರಿ ಬೀ ಳುವುದು ಖಚಿತವಾಗಿದೆ.