ಮುಂಬಯಿ, ಜೂ 18 (DaijworldNews/HR): ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇದೀಗ ಲಕ್ಷಾಂತರ ರೂಪಾಯಿಯ ವಂಚನೆಯಾಗಿದೆ ಎಂಬ ಸುದ್ದಿ ವರದಿಯಾಗಿದೆ.
ನಟಿ ರಶ್ಮಿಕಾ ಮಂದಣ್ಣ ಅವರ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಅವರಿಂದ 80 ಲಕ್ಷ ರೂ. ವಂಚನೆಯಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಮ್ಯಾನೇಜರ್ ಬಹು ಸಮಯದಿಂದ ನಟಿಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದು, ಮ್ಯಾನೇಜರ್ 80 ಲಕ್ಷ ರೂ. ವಂಚನೆ ಎಸಗಿದ ಬಗ್ಗೆ ಗೊತ್ತಾದ ಕೂಡಲೇ ನಟಿ ಮ್ಯಾನೇಜರ್ ನನ್ನು ವಜಾಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸದ್ಯ ಈ ಪ್ರಕರಣದ ಬಗ್ಗೆ ನಟಿ ರಶ್ಮಿಕಾ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.